ಎಎಫ್‌ಐ ಬೆಳ್ತಂಗಡಿ ಘಟಕ ಪದಗ್ರಹಣ

padagrahana
Published on

ಬೆಳ್ತಂಗಡಿ: ಆಯುಷ್ ಫೆಡರೇಷನ್ ಆಫ್ ಇಂಡಿಯಾ(ಎಎಫ್‌ಐ), ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಜಿರೆಯಲ್ಲಿ ನಡೆಯಿತು. ಎಎಫ್‌ಐ ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷೆ ಡಾ.ಸುಷ್ಮಾ ಡೋಂಗ್ರೆ ಅಧ್ಯಕ್ಷತೆ ವಹಿಸಿದ್ದರು.

ಎಎಫ್‌ಐ ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಂಗಳೂರಿನ ಡಾ.ಕೃಷ್ಣ ಗೋಖಲೆ ಪದಗ್ರಹಣ ಸಮಾರಂಭ ಸಿಡೆಸಿಕೊಟ್ಟುಂ.ಸಿ ಆಸ್ಪತ್ರೆಯ ಖ್ಯಾತ ವೈದ್ಯ, ಅತ್ತಾವರ ಕೆಎಂಸಿಯ ಮುಖ್ಯ ವೈದ್ಯಾಧಿಕಾರಿ ಡಾ.ಚಕ್ರಪಾಣಿ, ಕೆಎಂಸಿ ಆಸ್ಪತ್ರೆಯ ಸೊಂಟ ಮತ್ತು ಮಂಡಿ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಯೋಗೀಶ್ ಕಾಮತ್, ತಾಲೂಕಿನ ಹಿರಿಯ ವೈದ್ಯ ಡಾ.ಮೋಹನ್ ದಾಸ್ ಗೌಡ ಕೊಕ್ಕಡ, ಹಿಂದಿನ ಅವಧಿಯ ಕಾರ್ಯದರ್ಶಿ ಅಳದಂಗಡಿಯ ಡಾ.ಹರಿಪ್ರಸಾದ್ ಸುವರ್ಣ, ಎಎಫ್‌ಐ ಘಟಕದ ಜಿಲ್ಲಾ ಕಾರ್ಯದರ್ಶಿ ಡಾ.ಧನಂಜಯ್, ದಕ್ಷಿಣ ಕನ್ನಡದ ಆಯುಷ್ ಫೆಡರೇಷನ್‌ನ ಪೂರ್ವಾಧ್ಯಕ್ಷ ಡಾ.ನಾರಾಯಣ ಅಸ್ರ ಪುತ್ತೂರು ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕಿನ ಹೋಮಿಯೋಪತಿ ವೈದ್ಯೆ ಡಾ.ಗ್ರೆಟ್ಟಾ ಲೋಬೋ ಸ್ವಾಗತಿಸಿ ಡಾ.ಪ್ರದೀಪ್ ನಾವೂರು ವಂದಿಸಿದರು.ನ್ಯಾಚುರೋಪತಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ.ಚಾಂದಿನಿ ನಿರೂಪಿಸಿದರು.

ನೂತನ ಘಟಕದ ಅಧ್ಯಕ್ಷರಾಗಿ ಡಾ.ಸುಷ್ಮಾ ಡೋಂಗ್ರೆ, ಕಾರ್ಯದರ್ಶಿಯಾಗಿ ಡಾ.ಪದ್ರೀಪ್, ಉಪಾಧ್ಯಕ್ಷರಾಗಿ ಡಾ.ಸುಜಾತ ಸರಳಾಯ, ಡಾ.ಶಿವಾನಂದ ಸ್ವಾಮಿ ಹಾಗೂ ಡಾ.ಗ್ರೇಟಾ ಲೋಬೋ, ಜತೆಕಾರ್ಯದರ್ಶಿಯಾಗಿ ಡಾ.ಗಣೇಶ್ ಪ್ರಸಾದ್ ಕೊಕ್ಕಡ, ಕೋಶಾಧಿಕಾರಿಯಾಗಿ ಡಾ.ಅಮಿತ್ ಖಾಡಿಲ್ಕರ್ ಜವಾಬ್ದಾರಿ ವಹಿಸಿಕೊಂಡರು. ಡಾ.ಚಕ್ರಪಾಣಿ ಹಾಗೂ ಡಾ.ಯೋಗೀಶ್ ಕಾಮತ್ ಕಾರ್ಯಾಗಾರ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net