ಮಂಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜನಾಡಿ ಉಳ್ಳಾಲ ಬದ್ರಿಯನಗರ ನಿವಾಸಿ ಮೊಹಮ್ಮದ್ ಅಬ್ದುಲ್ ಯಾನ್ (27) ಬಂಧಿತ ಆರೋಪಿ.
ಈತನ ವಿರುದ್ದ ಕೊಣಾಜೆ, ಉಳ್ಳಾಲ, ಕಡಬ, ಬರ್ಕೆ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ನಗರ ಠಾಣೆಗಳಲ್ಲಿ ಒಟ್ಟು 24 ಪ್ರಕರಣಗಳಿವೆ. ಈತನು ಸುಮಾರು 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಮಂಜೇಶ್ವರದಲ್ಲಿ ಬಂಧಿಸಿದ್ದಾರೆ.
ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ., ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಎಸ್., ಸಿಬ್ಬಂದಿ ಹೆಚ್.ಸಿ. ಮಹಮ್ಮದ್ ಶರ್ೀ, ಪಿಸಿ ಸಂತೋಷ್ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.