

ಬೆಂಗಳೂರು: ಯಾವುದೇ ಕೆಲಸದಲ್ಲಿ ಸಾಧನೆಗೆ ಕ್ರೀಡಾಸ್ಫೂರ್ತಿ ಪ್ರಮುಖವಾದದ್ದು ಎಂದು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಹೇಳಿದ್ದಾರೆ.
ಸೌಂದರ್ಯ ಇನ್ಸಿಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ನಗರದಲ್ಲಿ ಬುಧವಾರ ಆಯೋಜಿಸಿದ್ದ ಅಂತರ್ ಕಾಲೇಜು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವ ಕ್ರೀಡೆ. ಜೀವನದ ಪಾಠ ಕಲಿಸುತ್ತದೆ. ಶಿಸ್ತಿಗೆ ಮತ್ತೊಂದು ಹೆಸರಾಗಿರುವ ಕ್ರೀಡೆ, ಜೀವನದ ಪ್ರತಿ ಹಂತದಲ್ಲೂ ನಿಖರತೆ ಪ್ರೆಜ್ಷೆಯನ್ನು ಅಭಿವೃದ್ಧಿಪಡಿಸುತ್ತದೆ. ಆಟಗಾರರು ಫಲಿತಾಂಶ ಬಗ್ಗೆ ಚಿಂತಿಸುವ ಬದಲು ಕ್ರೀಡಾ ಬದ್ಧತೆ ಮೇಲೆ ಹೆಚ್ಚು ಗಮನಹರಿಸಬೇಕು ಎಂದರು.
ನಿದೇಶಕ ಸಿಂಪಲ್ ಸುನಿ ಮಾತನಾಡಿ, ಕಾಲೇಜು ದಿನಗಳು ತಮ್ಮನ್ನು ಸೃಜನಶೀಲ ನಿರ್ದೇಶಕರಾಗಿ ಬೆಳೆಯಲು ಸಹಾಯ ಮಾಡಿತು. ವಿದ್ಯಾರ್ಥಿಗಳ ಜೀವನವೇ ಒಂದು ಪ್ರತ್ಯೇಕ ಲೋಕ ಇದ್ದಂತೆ. ಯಾವುದಾದರೂ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಓದುವಾಗಲೇ ಗುರಿ ಹಾಕಿಕೊಳ್ಳಬೇಕು. ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬದುಕಬೇಕು ಎಂದು ತಿಳಿಸಿದರು. ಸೌಂದರ್ಯ ಶಿಕ್ಷಣ ಸಂಸ್ಥೆಯ ಸಿಇಒ ಕೀರ್ತನ್ ಕುಮಾರ್, ನಟ ಅನಿರುದ್ಧ್ ಸೇರಿ ಮತ್ತಿತರರಿದ್ದರು.