ಮಾವನ ಮರ್ಮಾಂಗವನ್ನೇ ತುಳಿದು ಕೊಂದ ಅಳಿಯ!

Death
Published on

ಕಾರ್ಕಳ: ನಗರದ ಹಂಚಿಕಟ್ಟೆಯ ಫ್ಲಾಟ್ ಒಂದರಲ್ಲಿ ಕ್ಷುಲ್ಲಕ ಕಾರಣದಿಂದ ಉಂಟಾದ ಜಗಳದಲ್ಲಿ ಅಳಿಯನೊಬ್ಬ ಬಾರಿಸಿದ ಏಟಿಗೆ ಮಾವ ಜೀವ ಕಳೆದುಕೊಂಡಿದ್ದಾರೆ.

ಶೇಖ್ ಅಬೂಬಕ್ಕರ್ (57) ಜೀವ ಕಳೆದುಕೊಂಡವರು. ಡಿ.31ರಂದು ರಾತ್ರಿ 8ಗಂಟೆಗೆ ಫ್ಲಾಟ್‌ನಲ್ಲಿ ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್ ನ ಎಡ ಕೆನ್ನೆಗೆ ಹೊಡೆದು ಬಲವಾಗಿ ದೂಡಿ ಹಾಕಿದ್ದರಿಂದ ನೆಲಕ್ಕೆ ಬಿದ್ದರು. ಎದ್ದೇಳುವ ಸ್ಥಿತಿಯಲ್ಲಿ ಇಲ್ಲದ ಶೇಖ್ ಅಬೂಬಕ್ಕರ್ ಅವರ ಮರ್ಮಾಂಗಕ್ಕೆ ತೌಫಿಕ್ ಕಾಲಿನಿಂದ ತುಳಿದಿದ್ದನು.

ತೀವ್ರವಾಗಿ ಗಾಯಗೊಂಡಿದ್ದ ಶೇಖ್ ಅಬೂಬಕ್ಕರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಶೇಖ್ ಅಬೂಬಕ್ಕರ್ ಜ.1ರ ತಡರಾತ್ರಿ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net