

ಕೋಟ: ಸಾಲಿಗ್ರಾಮ ಪಪಂ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ನಿರ್ವಹಣೆಗೆ ಪಾರಂಪಳ್ಳಿಯಲ್ಲಿ ಘಟಕದ ಕಟ್ಟಡಕ್ಕೆ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಶಿಲಾನ್ಯಾಸಗೈದರು.
ಜನಾರ್ದನ ಅಡಿಗ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಸಾಲಿಗ್ರಾಮ ಪಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರಾದ ರಾಜು ಪೂಜಾರಿ, ಅನಸೂಯಾ ಹೇರ್ಳೆ, ಭಾಸ್ಕರ್ ಬಂಗೇರ, ರವೀಂದ್ರ ಕಾಮತ್, ಸಂಜೀವ ದೇವಾಡಿಗ, ಪುನೀತ್ ಪೂಜಾರಿ, ನಗರಾಭಿವೃದ್ಧಿ ಸಹಾಯಕ ಕಾರ್ಯಪಾಲಕ ಅಭಿಯಂತ ಮೋಹನ್ ರಾಜ್, ಮುಖ್ಯಾಧಿಕಾರಿ ಅಜೇಯ ಭಂಡಾರ್ಕರ್, ಪರಿಸರ ಅಭಿಯಂತ ರವಿ ಪ್ರಕಾಶ್, ಗುತ್ತಿಗೆದಾರರಾದ ಅರುಣ್ ಕಮಾರ್ ಹೊಳ್ಳ, ಸಂತೋಷ್ ಕೋಟ, ಪಪಂ ಸಿಬ್ಬಂದಿ ವರ್ಗ, ಪೌರಕಾರ್ಮಿಕರು ಉಪಸ್ಥಿತರಿದ್ದರು.