ಮಣ್ಣು ಕುಸಿದು ಕಾರ್ಮಿಕರಿಬ್ಬರು ಜೀವಂತ ಸಮಾಧಿ!

death case
Published on

ಮಂಗಳೂರು: ಗುಂಡಿ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವು ಎಂಬಲ್ಲಿ ಇಂದು(ಗುರುವಾರ) ಸಂಭವಿಸಿದೆ.

ಕಡಮ್ಮಾಜೆ ಹಾಜಿ ಅಬ್ದುಲ್ಲಾ ಎಂಬುವರಿಗೆ ಸೇರಿದ ಕೋಳಿ ಫಾರ್ಮ್‌ನ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ಕೆಲಸ ಅರ್ಲಪದವುನಲ್ಲಿ ನಡೆಯುತ್ತಿತ್ತು. ಕೂಲಿ ಕಾರ್ಮಿಕರಾದ ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಕೆಲಸ ಮಾಡುತ್ತಿದ್ದರು. ಜೆಸಿಬಿ ಮೂಲಕ ಹೊಂಡ ತೆಗೆಯುವ ಕಾಮಗಾರಿ ಪ್ರಗತಿಯಲ್ಲಿತ್ತು. ಈ ವೇಳೆ ಬಾಬು ಮತ್ತು ರವಿ ಹೊಂಡದ ಒಳಗೆ ಬಿದ್ದಿದ್ದು, ಕ್ಷಣಾರ್ಧದಲ್ಲಿ ಮಣ್ಣು ಕುಸಿದಿದೆ. ಕಾರ್ಮಿಕರಿಬ್ಬರೂ ಜೀವಂತ ಸಮಾಧಿಯಾಗಿದ್ದು, ಮೃತದೇಹವನ್ನು ಪುತ್ತೂರು ಅಗ್ನಿಶಾಮಕ ದಳ ಹಾಗೂ ಸಂಪ್ಯ ಪೊಲೀಸರು ಹೊರ ತೆಗೆದಿದ್ದಾರೆ. ಇದನ್ನೂ ಓದಿರಿ ವಿಧಾನಸೌಧದಲ್ಲೇ ಶರ್ಟ್​ ಬಿಚ್ಚಿದ ಶಾಸಕ! ಸ್ಪೀಕರ್​ ಫುಲ್​ ಗರಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net