ವಿಧಾನಸೌಧದಲ್ಲೇ ಶರ್ಟ್​ ಬಿಚ್ಚಿದ ಶಾಸಕ! ಸ್ಪೀಕರ್​ ಫುಲ್​ ಗರಂ

sangamesh
Published on

ಬೆಂಗಳೂರು: ಕಾಂಗ್ರೆಸ್​ ಶಾಸಕರೊಬ್ಬರು ಶರ್ಟ್​ ಬಿಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ವಿಧಾನಸಭೆ ಅಧಿವೇಶನಲ್ಲಿ ಇಂದು ಸಂಭವಿಸಿದೆ.

ಒನ್ ನೇಷನ್ ಒನ್ ಎಲೆಕ್ಷನ್​ ಕುರಿತು ಚರ್ಚೆಗೆ ವಿರೋಧಿಸಿದ ವಿಪಕ್ಷದವರು ಸ್ಪೀಕರ್​ ಮೇಲೆ ಪೇಪರ್​ ಎಸೆದು ಗರಂ ಆದರು. ಅದೇ ವೇಳೆ ತನ್ನ ಮೇಲೆ ದಬ್ಬಾಳಿಕೆ ಆಗ್ತಿದೆ ಎಂದು ಸದನದಲ್ಲೇ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ಮಾಡಿದರು. ಗರಂ ಆದ ಸ್ಪೀಕರ್, ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆ ಮಾಡ್ತೀರಾ? ಈ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಈ ರೀತಿ ಮಾಡಿದ್ರೆ ಕ್ರಮ ಕೈಗೊಳ್ತೀವಿ. ಸಭ್ಯತೆ ಮರೆತು ವರ್ತಿಸಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿರಿ ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…

ಹದಿನೈದು ನಿಮಿಷಗಳ ಕಾಲ ಸದನ ಮುಂದೂಡಿದ ಸ್ಪೀಕರ್​, ಪೀಠದಿಂದ ಎದ್ದು ಹೋದರೂ ಪ್ರತಿಭಟನೆಯ ಸ್ಥಳದಿಂದ ಶಾಸಕ ಸಂಗಮೇಶ್ ತೆರಳಲಿಲ್ಲ. ಕಾಂಗ್ರೆಸ್ ಶಾಸಕರು ಕರೆದ್ರೂ ಸಂಗಮೇಶ್​ ಪಟ್ಟು ಸಡಿಸಲಿಲ್ಲ. ಸ್ವತಃ ಸಿದ್ದರಾಮಯ್ಯ ಮನವೊಲಿಕೆ ಮಾಡಿದ್ರು ಜಗ್ಗಲಿಲ್ಲ. ನಂತರ ಡಿಕೆಶಿ ಅವರು ಶರ್ಟ್ ಹಾಕಿಸಿದರು.

ಶರ್ಟ್​ ಬಿಚ್ಚಿ ಅಶಿಸ್ತು ತೋರಿದ ಸಂಗಮೇಶ್​ ಅವರನ್ನ ಒಂದು ವಾರ ಸದನಕ್ಕೆ ಬಾರದಂತೆ ಅಮಾನತು ಮಾಡಿ ಸ್ಪೀಕರ್​ ಕಾಗೇರಿ ಆದೇಶಿಸಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net