Video-ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿಕೊಂಡ ಕನ್ನಡಿಗರು: ಸಹಾಯಕ್ಕೆ ಮೊರೆ

Snowfall 8
Snowfall
Published on

ಹುಬ್ಬಳ್ಳಿ: ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಹುಬ್ಬಳ್ಳಿಯ ಆರು ಜನರ ತಂಡ ಹಿಮಪಾತಕ್ಕೆ ಸಿಲುಕಿ ಪರದಾಡುವಂತಾಗಿದೆ.

ಸೋನಾ ಮಾರ್ಗದ ಗ್ಲಾಸಿಯರ್ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಹುಬ್ಬಳ್ಳಿಯ ಪ್ರಕಾಶ ಮೆಹರವಾಡೆ, ಸುಧಾ ಮೆಹರವಾಡೆ ಸೇರಿ ಹಲವರು ಪರದಾಡುವಂತಾಗಿದೆ. ಇವರು ಕಳೆದವಾರ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು.

ಹಿಮಪಾತದಿಂದ ಹೋಟೆಲ್ ನಲ್ಲೇ ಸಿಲುಕಿಕೊಂಡಿರುವವರು ವಿಡಿಯೋ ಮಾಡಿ ಸಹಾಯಕ್ಕೆ ಬೇಡಿಕೊಂಡಿದ್ದಾರೆ. ಸೋನಾ ಮಾರ್ಗ್​ ಪ್ರದೇಶದಲ್ಲಿ ತೀವ್ರ ಹಿಮಪಾತವಾಗುತ್ತಿರುವುದರಿಂದ ಸುಮಾರು ಏಳು ಅಡಿಗೂ ಹೆಚ್ಚು ಎತ್ತರದಲ್ಲಿ ಹಿಮ ಸಂಗ್ರಹವಾಗಿದೆ. ಹೀಗಾಗಿ ಹುಬ್ಬಳ್ಳಿಯ ಜನ ಹೋಟೆಲ್ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ.

ಹಿಮಪಾತದಿಂದ ಹೋಟೆಲ್​ನಲ್ಲಿ ಸಿಲುಕಿರುವವರಿಗೆ ಹೊಟೆಲ್ ನಲ್ಲೇ ಆಕ್ಸಿಜ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಪ್ರಕಾಶ್ ಮೆಹರವಾಡೆ ವಿಡಿಯೋದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net