ಆಕಾಶದಲ್ಲಿ 'ಸೂರ್ಯಕಿರಣ'ದ ಚಮತ್ಕಾರ; ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏರೋಬ್ಯಾಟಿಕ್ ತಂಡದ ಫಾರ್ಮೇಷನ್

Feature
Published on

ಬೆಂಗಳೂರು: ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ವಿಶಿಷ್ಟವಾಗಿ ಶುಭ ಕೋರಿರುವ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ, ಆಗಸದಲ್ಲಿ 75 ಅಂಕಿಯ ಫಾರ್ಮೇಷನ್‌ನಲ್ಲಿ ಹಾರಾಟ ನಡೆಸಿದೆ.

ಏರೋ ಇಂಡಿಯಾದಂತಹ ವೈಮಾನಿಕ ಪ್ರದರ್ಶನದ ವೇಳೆ ಬಾನಂಗಣದಲ್ಲಿ ಚಿತ್ತಾರ ಮೂಡಿಸಿರುವ ಸೂರ್ಯಕಿರಣ್ ಏರೋ ಬ್ಯಾಟಿಕ್ ತಂಡ ಒಂದಿಲ್ಲೊಂದು ಹೊಸತನವನ್ನು ಪ್ರದರ್ಶಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದ ವೇಳೆ ಸಾರಂಗ್ ತಂಡದೊಂದಿಗೆ ಸೇರಿ ಪ್ರದರ್ಶನ ನೀಡಿತ್ತು.

ಇದೀಗ ಭಾರತೀಯ ವಾಯುಸೇನೆ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಆಗಸದಲ್ಲಿ 75 ಅಂಕಿಯ ಫಾರ್ಮೇಷನ್‌ನಲ್ಲಿ ಹಾರಾಟ ನಡೆಸಿದೆ. ಗ್ರೂಪ್ ಕ್ಯಾಪ್ಟನ್ ಅನೂಪ್ ಸಿಂಗ್ ನೇತೃತ್ವದಲ್ಲಿ 17 ಹಾಕ್ ಐ ಏರ್‌ಕ್ರಾಫ್ಟ್​ಗಳು ಅರ್ಧ ಗಂಟೆ ಕಾಲ ಹಾರಾಟ ನಡೆಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net