ಕೇರಳದ ಡಿಜಿಟಲ್ ಸಮೀಕ್ಷೆ ದೇಶಕ್ಕೆ ಮಾದರಿ : ಕಂದಾಯ ಸಚಿವ ಕೆ.ರಾಜನ್ ಅಭಿಪ್ರಾಯ

New Project (15)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

‘ಎಲ್ಲರಿಗೂ ಭೂಮಿ ಮತ್ತು ಎಲ್ಲರಿಗೂ ಹಕ್ಕುಪತ್ರ’ ಎಂಬ ಪರಿಕಲ್ಪನೆ ಆಧಾರದ ಮೇಲೆ ಕೇರಳ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಸಮೀಕ್ಷೆ ದೇಶಕ್ಕೆ ಮಾದರಿಯಾಗಿರರುವುದಾಗಿ ಕಂದಾಯ ಮತ್ತು ವಸತಿ ಸಚಿವ ಕೆ.ರಾಜನ್ ಹೇಳಿದರು.

ಸರ್ಕಾರದ ಯೋಜನಾ ನಿಧಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೋಡೋತ್ ಸ್ಮಾರ್ಟ್ ವಿಲೇಜ್ ಕಚೇರಿ ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೋಡೋತ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಇ.ಚಂದ್ರಶೇಖರನ್ ಕಟ್ಟಡದ ಶಿಲಾಫಲಕ ಅನಾವರಣಗೊಳಿಸಿದರು. ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ.ರಾಜಮೋಹನ್ ವರದಿ ಮಂಡಿಸಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ, ಕೋಡೋಂ ಬೇಲೂರು ಗ್ರಾಪಂ ಅಧ್ಯಕ್ಷೆ ಪಿ.ಶ್ರೀಜಾ, ಜಿಪಂ ಸದಸ್ಯ ಶಿನೋಜ್ ಚಾಕೋ, ಬ್ಲಾಕ್ ಪಂಚಾಯಿತಿ ಸದಸ್ಯ ಪಿ.ವಿ.ಶ್ರೀಲತಾ, ಕೋಡೋಂಬೇಲೂರು ಗ್ರಾಪಂ ಉಪಾಧ್ಯಕ್ಷ ದಾಮೋದರನ್, ವಾರ್ಡ್ ಸದಸ್ಯರಾದ ಪಿ.ಕುಞಿಕೃಷ್ಣನ್ ಗೋಪಾಲನ್, ಆನ್ಸಿ ಜೋಸೆಫ್ ಉಪಸ್ಥಿತರಿದ್ದರು. ಕಾಂಞಂಗಾಡ್ ಪ್ರಭಾರ ಆರ್‌ಡಿಒ, ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್.ಲಾರೆನ್ಸ್ ಸ್ವಾಗತಿಸಿದರು. ವೆಳ್ಳರಿಕುಂಡು ತಹಸೀಲ್ದಾರ್ ಪಿ.ವಿ.ಮುರಳಿ ವಂದಿಸಿದರು.

ಕೇರಳದಲ್ಲಿ ಒಂದುವರೆ ವರ್ಷದಲ್ಲಿ ಡಿಜಿಟಲ್ ಸಮೀಕ್ಷೆ ಮೂಲಕ ನಾಲ್ಕೂವರೆ ಲಕ್ಷ ಹೆಕ್ಟೇರ್ ಭೂಮಿಯನ್ನು ಸರ್ವೇ ಮಾಡಲಾಗಿದೆ. ರಾಜ್ಯದ ಎಲ್ಲ 140 ವಿಧಾನಸಭಾ ಕ್ಷೇತ್ರಗಳಲ್ಲಿ ಕಂದಾಯ ಇಲಾಖೆ ಒಂಬತ್ತು ವರ್ಷಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿರುವ ಹಕ್ಕುಪತ್ರ ಅದಾಲತ್‌ಗಳ ಮೂಲಕ ನಾಲ್ಕು ಲಕ್ಷಕ್ಕೂ ಹೆಚ್ಚು ಭೂಮಾಲೀಕರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿದೆ. ಸೇವೆಗಳನ್ನು ಹೆಚ್ಚು ಡಿಜಿಟಲ್ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿ ಕೇರಳದ 600 ಗ್ರಾಮ ಕಚೇರಿಗಳನ್ನು ಸ್ಮಾರ್ಟ್ ಗ್ರಾಮಗಳಾಗಿ ಪರಿವರ್ತಿಸಲಾಗುತ್ತಿದೆ. ಇದರ ಭಾಗವಾಗಿ ಈ ಹಿಂದೆ ಕಂದಾಯ ಕಚೇರಿಗಳಿಂದ ಪಡೆಯಬೇಕಾಗಿದ್ದ 14 ದಾಖಲೆಗಳನ್ನು ಒಂದೇ ಚಿಪ್‌ನಲ್ಲಿ ಒಳಪಡಿಸಿ ಸರ್ಕಾರಿ ಸೇವೆಗಳನ್ನು ಕಂದಾಯ ಕಾರ್ಡ್‌ಗಳ ರೂಪದಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಕೆ.ರಾಜನ್ ಕಂದಾಯ ಮತ್ತು ವಸತಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net