ತಳಂಗರೆ ಸರ್ಕಾರಿ ಶಾಲಾ ಸುವರ್ಣ ಮಹೋತ್ಸವ : ಸಸಿ ನೆಡುವ ಕಾರ್ಯಕ್ಕೆ ಚಾಲನೆ

New Project (1)
Published on

ಕಾಸರಗೋಡು: ತಳಂಗರೆ ಸರ್ಕಾರಿ ಮುಸ್ಲಿಂ ಪ್ರೌಢಶಾಲೆಯ 75ನೇ ಬ್ಯಾಚ್‌ನ ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ, ‘ಗ್ರೀನ್ ಕಾಸರಗೋಡು’ ಯೋಜನೆಯ ಮೂರನೇ ಹಂತವನ್ನು ಮುನ್ನಾಡ್ ಪೀಪಲ್ಸ್ ಕಾಲೇಜು ಆವರಣದಲ್ಲಿ ಆರಂಭಿಸಲಾಯಿತು.

ಮುನ್ನಾಡ್ ಪೀಪಲ್ಸ್ ಕಾಲೇಜು ವಠಾರದಲ್ಲಿ ಕಾಸರಗೋಡು ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಇ.ಪದ್ಮಾವತಿ ಸಸಿ ನೆಡುವ ಮೂಲಕ ಉದ್ಘಾಟಿಸಿದರು.

ಪ್ರಾಂಶುಪಾಲ ಸಿ.ಕೆ.ಲೂಕೋಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕರುಣಾಕರನ್ ವಿಸ್ಮಯ, ಬಶೀರ್ ವಾಲಿಬಾಲ್, ಬಿ.ಯು.ಅಬ್ದುಲ್ಲಾ, ಸಿ.ಎಲ್.ಹನೀಫ, ಸಿ.ಎಂ.ಮುಸ್ತಫಾ, ಪಿ.ಎ.ಮಜೀದ್, ಪಟ್ಲ ಮಹಮ್ಮದ್‌ಕುಞಿ, ಬಿ.ಎಂ.ಅಬ್ದುಲ್ಲಾ, ಕಬೀರ್, ಅಬ್ದುಲ್ ರೆಹಮಾನ್, ಪಿ.ಎ.ಸಲಾಂ, ಸಿ.ಎಲ್.ಮಿರ್ಷಾದ್, ಕೆ.ಎಂ.ಅಬ್ದುಲ್ ಖಾದರ್, ಟಿ.ಶ್ರೀಲತಾ, ಇ.ಕೆ.ರಾಜೇಶ್, ಕೆ.ಮುರಳೀಧರನ್, ಪಾಯಂ ವಿಜಯನ್, ಕೆ.ವಿ.ಸಜಿತ್, ಎಂ.ಲತಿಕಾ, ಎಂ.ವಿನೋದ್ ಕುಮಾರ್, ಸುರೇಶ್ ಪಯ್ಯಂಗಾನಂ ಉಪಸ್ಥಿತರಿದ್ದರು. ಎಂ.ಎ.ಲತೀಫ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net