ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ ಯಶಸ್ಸು: ವಿಜೇತರಿಗೆ ತಲಾ 1 ಲಕ್ಷ ರೂ.ಬಹುಮಾನ

rama
Published on

ಬೆಂಗಳೂರು: University of Applied Sciences​(ಆರ್​ಯುಎಎಸ್​) ಆತಿಥ್ಯವಹಿಸಿದ್ದ ಸಾಫ್ಟ್​​​​ವೇರ್​ ಆವೃತ್ತಿಯ "ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​' ಫಿನಾಲೆ ಯಶಸ್ಸು ಕಂಡಿದೆ. ವಿಜೇತರಿಗೆ ತಲಾ 1 ಲಕ್ಷ ರೂ.ಬಹುಮಾನ ವಿತರಿಸಲಾಯಿತು.

ಶಿಕ್ಷಣ ಸಚಿವಾಲಯದ ನಾವೀನ್ಯತಾ ಸೆಲ್​(ಎಂಐಸಿ) ಅಡಿ ನಡೆಯುವ ಈ ಕಾರ್ಯಕ್ರಮ ಆರ್​ಯುಎಎಸ್​ ಪಾಲಿಕೆ ಹೆಮ್ಮೆ ತಂದಿದೆ. ಸ್ಪರ್ಧೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಸಮಸ್ಯೆಗಳನ್ನು ಜಲಶಕ್ತಿ ಸಚಿವಾಲಯ ನೀಡಿತ್ತು. ಇದಕ್ಕೆ ವಿದ್ಯಾರ್ಥಿಗಳ ತಂಡ ಒದಗಿಸಿದ ಪರಿಹಾರ ಮೌಲ್ಯಮಾಪನವನ್ನು ತಜ್ಞರ ಗುಂಪು ಮಾಡಿತ್ತು. ತಂತ್ರಜ್ಞಾನ ಬಳಸಿಕೊಂಡು ಸವಾಲು, ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹದು ಎಂಬುದನ್ನು ನವೀನ ಮಾದರಿಯಲ್ಲಿ ಪ್ರಸ್ತುತಪಡಿಸುವುದು ವಿದ್ಯಾರ್ಥಿಗಳ ತಂಡದ ಸ್ಪರ್ಧೆಯಾಗಿತ್ತು.

ಎಐಸಿಟಿಇ ಸಲಹೆಗಾರ ಡಾ.ಎನ್​.ಎಚ್​.ಸಿದ್ದಲಿಂಗ ಸ್ವಾಮಿ, ಯು.ಆರ್​.ರಾವ್​ ಉಪಗ್ರಹ ಕೇಂದ್ರದ ವಿಜ್ಞಾನಿ ಜೀವನ ಕುಮಾರ್​ ಪಂಡಿತ್​, ರಾಮಯ್ಯ ಯೂನಿವರ್ಸಿಟಿ ಆಫ್​​​​ ಅಪ್ಲೆಡ್​ ಸೈನ್ಸಸ್​ ಉಪಕುಲಪತಿ ಡಿ. ಕುಲದೀಪ ರೈನಾ ವಿವಿಧ ವಿಚಾರ ಕುರಿತು ಮಾತನಾಡಿದರು. ಉತ್ತರ ಪ್ರದೇಶ, ಪಶ್ಚಿಮಬಂಗಾಳ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್​, ಕರ್ನಾಟಕ, ದೆಹಲಿ ಗುಜರಾತ್​ ಮತ್ತು ಆಂಧ್ರಪ್ರದೇಶ ಸೇರಿ ದೇಶದ 17 ರಾಜ್ಯಗಳಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ದೇಶದ ಭವಿಷ್ಯ ರೂಪಿಸಲು ನಾವೀನ್ಯತೆ, ಸೃಜನಾತ್ಮಕತೆ ಬಹಳ ಮುಖ್ಯವಾದದ್ದು. ಉತ್ಕೃಷ್ಟತೆ ಸಂಸ್ಕೃತಿ ಪ್ರೋತ್ಸಾಹಿಸಲು ನಮ್ಮ ಸಂಸ್ಥೆ ಯಾವಾಗಲೂ ಬದ್ಧತೆ ತೋರಿಸಿದೆ. ಸಾಮಾಜಿಕ ಪ್ರಗತಿಗೆ ಸಹಯೋಗ, ಸ್ಥಿರತೆ, ಭವಿಷ್ಯದ ಮುಂದಾಲೋಚನೆ ಚಿಂತೆ ಬಹಳ ಮುಖ್ಯವಾದದ್ದು.

| ಡಾ.ಎಂ.ಆರ್​.ಜಯರಾಮ್​, ಆರ್​ಯುಎಎಸ್​ ಕುಲಪತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net