ಹೊಸ ಆವಿಷ್ಕಾರಕ್ಕೆ ಮುಂದಾಗಿ: ಯುವ ಸಮುದಾಯಕ್ಕೆ ಪ್ರಧಾನಿ ಕರೆ

modi
Published on

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಹೊಸ ತಂತ್ರಜ್ಷಾನ ಆವಿಷ್ಕಾರ ಮಾಡಲು ಯುವ ಸಮುದಾಯ ಆದ್ಯತೆ ನೀಡುವಂತಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನಗರದ ನ್ಯೂ ಹೊರೈಝನ್​ ಕಾಲೇಜ್​ ಆಫ್​ ಇಂಜಿನಿಯರಿಂಗ್​ನಲ್ಲಿ ಗುರುವಾರ ಆಯೋಜಿಸಿದ್ದ "ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​' ಕಾರ್ಯಕ್ರಮದಲ್ಲಿ ವರ್ಚುಯಲ್​ ಮೂಲಕ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಬರುವ ಕುಂಭಮೇಳದಲ್ಲಿ ಕೋಟ್ಯಂತರ ಜನರನ್ನು ಸ್ವಾಗತಿಸಲು ವ್ಯಾಪಕ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಸವಾಲು ಎದುರಿಸಲು ತಂತ್ರಾನದ ಸದುಪಯೋಗದ ಅಗತ್ಯವಿದೆ. ಕೇಂದ್ರ ಸರ್ಕಾರದ ಶೈಕ್ಷಣಿಕ ಮತ್ತು ವೃತ್ತಿ ಉಪಕ್ರಮಗಳಿಗೆ ಆದ್ಯತೆ ನೀಡುವ ಮೂಲಕ 2047ರ ವೇಳೆಗೆ "ವಿಕಸಿತ ಭಾರತ ನಿರ್ಮಾಣ'ವನ್ನು ಸಾಕಾರಗೊಳಿಸುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದರು.

11 ರಾಜ್ಯಗಳ 34 ಉನ್ನತ ಶಿಕ್ಷಣ ಸಂಸ್ಥೆಗಳ ತಂಡಗಳು ಹ್ಯಾಕಥಾನಲ್ಲಿ ಭಾಗಿಯಾಗಿದ್ದರು. ಮ್ಯಾಥ್​ ವರ್ಕ್ಸ್​, ಕೇಂದ್ರೀಯ ಜಲಮಂಡಳಿ, ಜಲಶಕ್ತಿ ಸಚಿವಾಲಯದ ಗಂಗಾನದಿ ಶುದ್ದೀಕರಣ ಕುರಿತ ರಾಷ್ಟ್ರೀಯ ಅಭಿಯಾನದ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಎಐಸಿಟಿಇ ಅಧ್ಯಕ್ಷ ಪೊ.ಟಿ.ಜಿ.ಸೀತಾರಾಮ್​, ಉಪಾಧ್ಯಕ್ಷ ಡಾ. ಅಭಯ್​ ಜೇರೆ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಹ್ಯಾಕಥಾನ್​ಗೆ ಚಾಲನೆ ನೀಡಿದರು. ಜೈಪುರದ ಎಲ್​ಎನ್​ಎಂ ಮಾಹಿತಿ ತಂತ್ರಾನ ಕಾಲೇಜಿನ ವಿದ್ಯಾರ್ಥಿ ದೇವ್​ ಸೋನಿ, ಕೇಂದ್ರ ಅಂತರ್ಜಲ ಇಲಾಖೆಯ ಶೈಲೇಂದ್ರ ನಾಥ್​, ಎನ್​ಎಚ್​ಸಿಇ ಪ್ರಾಂಶುಪಾಲ ಡಾ. ಮಂಜುನಾಥ್​ ಸೇರಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net