ಮನೆಯಲ್ಲಿ ನಿದ್ರಿಸುತ್ತಿದ್ದ ಬಾಲಕಿ ಅಪಹರಿಸಿ ಚಿನ್ನ ದರೋಡೆ

kidnap
Published on

ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡಿನ ಸಮೀಪ ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತು ವರ್ಷದ ಬಾಲಕಿಯನ್ನು ಅಪಹರಿಸಿ, ಮೈಮೇಲಿದ್ದ ಚಿನ್ನಾಭರಣ ಕಸಿದು ರಸ್ತೆಬದಿ ಉಪೇಕ್ಷಿಸಿ ಪರಾರಿಯಾದ ಘಟನೆ ನಡೆದಿದೆ. ಅಲ್ಲಿಂದ ಸನಿಹದ ಮನೆಗೆ ತೆರಳಿದ ಬಾಲಕಿ ಮನೆಯವರನ್ನು ಎಚ್ಚರಿಸಿ ನಡೆದ ಘಟನೆ ತಿಳಿಸಿದ್ದಾಳೆ.


ತಂದೆ ಬೆಳಗಿನ ಜಾವ 3ಕ್ಕೆ ಎದ್ದು ಹಾಲು ಕರೆಯುವ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಒಳಹೊಕ್ಕ ದುಷ್ಕರ್ಮಿ ಬಾಲಕಿಯನ್ನು ಅಪಹರಿಸಿರುವುದಾಗಿ ಸಂಶಯಿಸಲಾಗಿದೆ. ಮನೆಯಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದ ಹಿನ್ನೆಲೆಯಲ್ಲಿ ಬಾಲಕಿಯ ಅಪಹರಣ ಅರಿವಿಗೆ ಬಂದಿರಲಿಲ್ಲ. ನಿದ್ದೆಯಲ್ಲಿದ್ದ ಬಾಲಕಿಯನ್ನು ಬಗಲಲ್ಲಿ ಹಾಕಿ ಹೊರ ನಡೆದ ದುಷ್ಕರ್ಮಿ, ನಂತರ ಚಿನ್ನಾಭರಣ ಕಸಿದು ಬಾಲಕಿ ಮೇಲೆ ದೌರ್ಜನ್ಯಕ್ಕೂ ಯತ್ನಿಸಿರುವುದಾಗಿ ಸಂಶಯಿಸಲಾಗಿದೆ. ಇದರಿಂದ ಬಾಲಕಿ ಕತ್ತಿನ ಭಾಗದಲ್ಲಿ ಗಾಯಗಳುಂಟಾಗಿದೆ. ಬಾಲಕಿ ಭಯ ಹಾಗೂ ಉದ್ವೇಗದೊಂದಿಗೆ ಸಮೀಪದ ಮನೆಗೆ ಓಡಿಹೋಗಿ ಕಾಲ್‌ಬೆಲ್ ಅದುಮಿ, ಮನೆಯವರನ್ನು ಎಬ್ಬಿಸಿ ನಡೆದ ಘಟನೆ ವಿವರಿಸಿದ್ದಾಳೆ. ನಂತರ ಮನೆಯವರು ಬಾಲಕಿಯನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net