More

    ಕೃಷಿ ಪ್ರದೇಶಗಳಿಗೆ ನುಗ್ಗಿದ ಮಳೆನೀರು, ಚತುಷ್ಪಥ ಕಾಮಗಾರಿ ಅವಾಂತರ

    ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಬದಿಯಲ್ಲಿದ್ದ ದೊಡ್ಡ ತೋಡೊಂದು ಮುಚ್ಚಲ್ಪಟ್ಟಿದ್ದು, ನಿನ್ನೆ ಸುರಿದ ಮಳೆಗೆ ಚರಂಡಿಯಲ್ಲಿ ನೀರು ಹರಿಯಲಾಗದೆ ನಟ್ಟಿಬೈಲ್‌ನ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ.

    ಈ ಬಾರಿ ಸಮರ್ಪಕ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದು, ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಭಾನುವಾರ ಸುರಿದ ಮಳೆಗೆ ಚರಂಡಿಯಲ್ಲಿ ಹರಿದು ಬಂದ ನೀರು ಮುಂದಕ್ಕೆ ಸರಾಗವಾಗಿ ಹರಿಯಲಾಗದೆ ನಟ್ಟಿಬೈಲು ಪ್ರದೇಶದ ಕೃಷಿ ಭೂಮಿಗೆ ನುಗ್ಗಿದೆ. ಇದು ಮುಂಬರುವ ಮಳೆಗಾಲದಲ್ಲಿ ಅನುಭವಿಸಬೇಕಾದ ಅಪಾಯದ ಪೂರ್ವ ಸೂಚನೆಯಂತಿದ್ದು, ಕಾಮಗಾರಿ ನಿರತ ಸಂಸ್ಥೆ ಗಮನ ಹರಿಸಬೇಕೆಂದು ನಟ್ಟಿಬೈಲು ಪ್ರದೇಶದ ಜನರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts