ಶಿರಾದಲ್ಲಿ ಜೆಡಿಎಸ್‌ಗೆ ಸ್ಥಳೀಯ ನಾಯಕರ ಗುಡ್‌ಬೈ: ಬಿಜೆಪಿ-ಕಾಂಗ್ರೆಸ್‌ನತ್ತ ದೌಡು!

BJP Congress JDS For Web 6x4
Published on

ತುಮಕೂರು: ಶಾಸಕ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದ ನಂತರ ಜೆಡಿಎಸ್‌ನಲ್ಲಿ ಸಮರ್ಥ ನಾಯಕತ್ವದ ಅಭಾವದಿಂದಾಗಿ, ಸ್ಥಳೀಯ ಮುಖಂಡರನ್ನು ಹಿಡಿದಿಟ್ಟುಕೊಳ್ಳುವುದೇ ಆ ಪಕ್ಷದ ಹಿರಿಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.

ಅಣೆಕಟ್ಟಿನಲ್ಲಿ ಗೇಟ್ ತೆಗೆದಾಗ ಹೇಗೆ ನೀರು ರಭಸವಾಗಿ ಹೊರಬರುತ್ತದೆಯೋ ಹಾಗೆ ಶಿರಾ ಟಿಕೆಟ್ ಘೋಷಣೆಯಾದ ಕೂಡಲೇ ಕಾರ್ಯಕರ್ತರು ಅನ್ಯಪಕ್ಷಗಳಿಗೆ ವಲಸೆ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಂಡಿರುವ ಬಿಜೆಪಿ, ಇತರ ಪಕ್ಷಗಳಿಂದ ಹೆಚ್ಚು ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಕೆಲಸವನ್ನು ಜೆಡಿಎಸ್ ತಡವಾಗಿ ಆರಂಭಿಸಿರುವುದೂ ಇದಕ್ಕೊಂದು ಕಾರಣ.

ಪ್ರತಿನಿತ್ಯ ಪಕ್ಷಾಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿದಿನ ನೂರಾರು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬೀಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net