ರವಿಕುಮಾರ್‌ಗೆ ಕರೊನಾ ಸೋಂಕು; ಶಿರಾ ಬಿಜೆಪಿ ಪ್ರಚಾರಕ್ಕೆ ಹಿನ್ನಡೆ

RAVIKUMAR MLC
Published on

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಕ್ಷೇತ್ರದೆಲ್ಲೆಡೆ ಮಿಂಚಿನ ಸಂಚಾರ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಕರೊನಾ ದೃಢವಾಗಿದ್ದು ಬಿಜೆಪಿ ಪಾಳಯದಲ್ಲಿ ಚುನಾವಣೆ ಕಾರ್ಯತಂತ್ರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.

ತಮಗೆ ಸೋಂಕು ತಗುಲಿರುವುದನ್ನು ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿರುವ ರವಿಕುಮಾರ್, ರೋಗಲಕ್ಷಣ ರಹಿತ ಸೋಂಕು ದೃಢವಾಗಿದ್ದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಕಳೆದೊಂದು ತಿಂಗಳಿನಿಂದ ಸತತವಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಸಂಪರ್ಕದಲ್ಲಿದ್ದು ಅವರೆಲ್ಲ್ಲ ಪರೀಕ್ಷೆಗೆ ಒಳಗಾಗುವಂತೆ ರವಿಕುಮಾರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net