ಜು.1ರಿಂದ ಸಿಂಗೇನ ಅಗ್ರಹಾರ ಮಾರ್ಕೆಟ್ ಬಂದ್

Market
Published on

ಬೆಂಗಳೂರು: ನಗರದ ಹೊರವಲಯದಲ್ಲಿರುವ ಸಿಂಗೇನ ಅಗ್ರಹಾರ ಮಾರುಕಟ್ಟೆ ಪ್ರಾಂಗಣದಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಂಗೇನಹಳ್ಳಿ ಸಗಟು ಹಣ್ಣಿನ ಮಾರುಕಟ್ಟೆಯನ್ನು ಜು.1 ರಿಂದ ಸ್ಥಗಿತಗೊಳಿಸಲು ವರ್ತಕರು ನಿರ್ಧರಿಸಿದ್ದಾರೆ.

ಮಾರುಕಟ್ಟೆ ಪ್ರಾಂಗಣದಲ್ಲಿದ್ದ ಇಬ್ಬರಿಗೆ ಸೋಂಕು ಹರಡಿ ಮೃತಪಟ್ಟಿದ್ದರು. ಹಣ್ಣಿನ ಅಂಗಡಿಯಲ್ಲಿದ್ದ ಮೂವರಿಗೆ ಸೋಂಕು ಹರಡಿದೆ. ಅಲ್ಲದೆ ಮಂಡಿ ವರ್ತಕರಿಗೆ ಹಾಗೂ ಕೆಲಸಗಾರರಿಗೆ ಸೋಂಕು ಹರಡಿರುವುದರಿಂದ ವರ್ತಕರು ಸ್ವಯಂಪ್ರೇರಿತರಾಗಿ ಮಳಿಗೆ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಪ್ರಾಂಗಣದಲ್ಲಿ ಮಳಿಗೆ ಹೊಂದಿರುವ ಕೆಲವು ವ್ಯಾಪಾರಿಗಳು ಹಣ್ಣುಗಳನ್ನು ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಹೀಗಾಗಿ ಕೊರೊನಾ ಸೋಂಕು ಹರಡುವ ಭೀತಿ ವರ್ತಕರಲ್ಲಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net