ಭಾರತ್ ಜೋಡೋ ಯಾತ್ರೆಯ ಜನಬೆಂಬಲ ನೋಡಿ ಬಿಜೆಪಿ ಭಯ ಶುರುವಾಗಿದೆ; ಸಿದ್ದರಾಮಯ್ಯ

siddaramaiah
Published on

ಚಾಮರಾಜನಗರ: ಜನರಿಗೆ ಆತ್ಮ ಸ್ಥೈರ್ಯ ರಾಹುಲ್ ಗಾಂಧಿ ತುಂಬಲು ಯಾತ್ರೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲು ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಜನಬೆಂಬಲ ಸಿಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯವರ ಟೀಕೆಗೆ ಉತ್ತರಿಸಿದರು.

ಬಿಜೆಪಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಸಂವಿಧಾನವನ್ನು ಬಿಜೆಪಿ ವಿರೋಧ ಮಾಡುತ್ತೆಲೆ ಬಂದಿದೆ. ಸರ್ಕಾರದ ನೀತಿ, ನಿರ್ಧಾರ ಪ್ರಶ್ನೆ ಮಾಡುವ ಹಾಗಿಲ್ಲ. ಅವರಿಗೆ ವ್ಯಕ್ತಿ, ಸ್ವಾತಂತ್ರ್ಯದ ಬಗ್ಗೆ ನಂಬಿಕೆಯಿಲ್ಲ . ಪ್ರಶ್ನೆ ಮಾಡಿದರೆ ಕೇಸ್ ಹಾಕಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ.

ನಿನ್ನೆ ಆದಿವಾಸಿಗಳು ಹಾಗೂ ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತರ ಜೊತೆ ಸಂವಾದ ನಡೆಸಿದ್ದೆವು. ಸರಿಯಾದ ಸಮಯಕ್ಕೆ ಆಕ್ಸಿಜನ್ ಲಭಿಸಿದ್ದರೆ, ಅವರೆಲ್ಲ ಬದಕುತ್ತಿದ್ದರು. ಮೃತರೆಲ್ಲರು ಅವರ ಮನೆಯ ಆಧಾರ ಸ್ಥಂಭ ಆಗಿದ್ದರು. ಅವರ ಸಾವಿಗೆ ಸರ್ಕಾರವೇ ಕಾರಣ. ಸರ್ಕಾರ ಸರಿಯಾದ ಪರಿಹಾರ ಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಭಾರತ್ ಜೋಡೋ ಯಾತ್ರೆಯ ಜನಬೆಂಬಲ ನೋಡಿ ಬಿಜೆಪಿ ಭಯ ಶುರುವಾಗಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನೆಹರೂ ದೇಶ ಒಡೆದ್ರು, ಈಗ ಮೊಮ್ಮಗ ದೇಶ ಜೊಡಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಭಾರತವನ್ನು ಜೋಡಿಸಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯಕ್ಕಾಗಿ ಆರ್​​ಎಸ್​ಎಸ್ ನಿಂದ ಯಾರು ಸತ್ತಿಲ್ಲ. ನೆಹರು ಕುಟುಂಬ ದೇಶಕ್ಕೆ ಸಾಕಷ್ಟು ತ್ಯಾಗ ಮಾಡಿದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಬಲಿದಾನ ಮಾಡಿದ್ದಾರೆ. ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net