ಸನ್ಮಾನಕ್ಕೆಂದು ತಂದ ಬಾಳೆಹಣ್ಣನ್ನೇ ತಿಂದ ಸಿದ್ದರಾಮಯ್ಯ!

ಸನ್ಮಾನಕ್ಕೆಂದು ತಂದ ಬಾಳೆಹಣ್ಣನ್ನೇ ತಿಂದ ಸಿದ್ದರಾಮಯ್ಯ! #siddaramaiah #eatbanana #felicitation-plate - youtube
Published on

ಬಾದಾಮಿ: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಕಾರ್ಯಕ್ರಮವೊಂದರಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣ ಬಾಳೆಹಣ್ಣು. ಹೌದು.. ಸನ್ಮಾನಕ್ಕೆಂದು ತಂದ ಬಾಳೆಹಣ್ಣನ್ನೇ ತಕ್ಷಣ ತೆಗೆದುಕೊಂಡು ಅವರು ತಿಂದಿದ್ದಾರೆ.

ಬಾದಾಮಿಯಲ್ಲಿ ಕಲ್ಯಾಣಮಂಟಪವೊಂದರ ಉದ್ಘಾಟನೆ ಕಾರ್ಯಕ್ರಮದ ವೇಳೆ ಇಂಥದ್ದೊಂದು ವಿದ್ಯಮಾನ ನಡೆದಿದೆ. ಕಾಂಗ್ರೆಸ್ ಮುಖಂಡ ಮಹೇಶ್ ಹೊಸಗೌಡ್ರ ಅವರು ಮಾಜಿ ಸಚಿವ ಹಾಗೂ ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿರುವ ಆರ್​.ಬಿ. ತಿಮ್ಮಾಪುರ ಅವರನ್ನು ಸನ್ಮಾನಿಸಿದ್ದರು.

ಈ ಸನ್ಮಾನ ಸಂದರ್ಭದಲ್ಲಿ ಅಲ್ಲೇ ಇದ್ದ ಸಿದ್ದರಾಮಯ್ಯ ಅವರು ಸನ್ಮಾನದ ತಟ್ಟೆಯಲ್ಲಿದ್ದ ಹಣ್ಣನ್ನು ತಕ್ಷಣ ಕಿತ್ತು ತೆಗೆದುಕೊಂಡು ಸೇವಿಸಿದ್ದಾರೆ. ಇದು ಅಲ್ಲಿದ್ದ ಹಲವರ ಗಮನ ಸೆಳೆದಿದ್ದು, ಸಿದ್ದರಾಮಯ್ಯ ಅವರಿಗೆ ಸಿಕ್ಕಾಪಟ್ಟೆ ಹಸಿವಾಗಿರಬೇಕು ಎಂದು ಮಾತಾಡಿಕೊಂಡಿದ್ದೂ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net