

ಹೆಬ್ರಿ: ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಸಭಾಂಗಣದಲ್ಲಿ 21ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ನಡೆಯಿತು.
ದೇವರಿಗೆ ಹೂವಿನ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆ, ಸ್ಥಳೀಯ ಮಕ್ಕಳ ಕೃಷ್ಣ ವೇಷ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ ಜರುಗಿತು. ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀಧರ ಪೈ, ದಾನಿ ಕಿಶೋರ್ ಶೆಟ್ಟಿ ಬೆಳಗಾವಿ, ಗುತ್ತಿಗೆದಾರ ಕಾಡುಹೊಳೆ ಹರೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮಠದ ಅರ್ಚಕ ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜಂಗಮೇಶ್ವರ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಉದ್ಯಮಿ ಕಿಶೋರ್ ಶೆಟ್ಟಿ ಬೆಳಗಾವಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷೆ ವೀಣಾ ಪ್ರಭು, ಗಿರೀಶ್ ನಾಯ್ಕ ಉಪಸ್ಥಿತರಿದ್ದರು. ರಾಮದಾಸ್ ನಾಯಕ್ ಸ್ವಾಗತಿಸಿದರು. ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಹರೀಶ್ ಸಹಕರಿಸಿದರು.