

ಸಿದ್ದಾಪುರ: ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲ ರಾಧೆ ಮತ್ತು ಬಾಲ ಕೃಷ್ಣ ಸ್ಪರ್ಧೆ ಇತ್ತೀಚೆಗೆ ನಡೆಯಿತು. ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಶಾನ್ಕಟ್ಟು, ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ಶಾನ್ಕಟ್ಟು ನವೀನಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಚೈತ್ರ ಯಡಿಯಾಳ, ನಿವೃತ್ತ ಸೈನಿಕ ಮಂಜು ಮೊಗವೀರ, ಜ್ಯೋತಿ ಉದಯಕುಮಾರ್ ಶೆಟ್ಟಿ ಮೂಡುಬಗೆ, ಸತೀಶ ಕುಮಾರ್ ಶೆಟ್ಟಿ ಮೂಡುಬಗೆ, ನಿರ್ದೇಶಕರಾದ ಅಶೋಕ ಅಂಪಾರು, ಅರುಣಕುಮಾರ್ ಶೆಟ್ಟಿ, ಸ್ಪರ್ಧೆ ತೀರ್ಪುಗಾರ, ಉದ್ಯಮಿ ರಂಜನಾ ಪ್ರಭು, ನಿವೃತ್ತ ಅಧ್ಯಾಪಕ ರಾಜೀವ ಶೆಟ್ಟಿ, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.