ಸಾಮಾಜಿಕ ಕಾರ್ಯಕ್ಕೆ ಲಾಭ ವಿನಿಯೋಗ

rosario
ತ್ರಾಸಿಯಲ್ಲಿ ಹೋಲಿಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಎರಡನೇ ಶಾಖೆಯನ್ನು ಕ್ರಿಸ್ಟ್‌ಕಿಂಗ್ ಚರ್ಚ್ ಧರ್ಮಗುರು ರೋಸಾರಿಯೊ ಫರ್ನಾಂಡೀಸ್ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಆರ್ಥಿಕ ಸಂಸ್ಥೆ ಲಾಭದ ಕಡೆ ಹೆಚ್ಚು ಗಮನ ನೀಡದೆ, ಲಾಭದಲ್ಲಿ ಹೆಚ್ಚಿನ ಹಣವನ್ನು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕು. ಆರ್ಥಿಕ ಸಂಸ್ಥೆಗಳು ಆಧುನಿಕತೆಗೆ ಹೊಂದಿಕೊಳ್ಳುವ ಮೂಲಕ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಬೇಕು ಎಂದು ತ್ರಾಸಿ ಕ್ರಿಸ್ಟ್‌ಕಿಂಗ್ ಚರ್ಚ್ ಧರ್ಮಗುರು ರೋಸಾರಿಯೊ ಫರ್ನಾಂಡಿಸ್ ಹೇಳಿದರು.

ತ್ರಾಸಿಯಲ್ಲಿ ಬುಧವಾರ ಹೋಲಿಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್‌ನ ಎರಡನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸದಂತಹ ಅಮೂಲ್ಯ ತತ್ವಗಳ ಬುನಾದಿಯ ಆಧಾರದ ಮೇಲೆ ಸಹಕಾರಿ ಸಂಘಗಳು ಅಸ್ತಿತ್ವಕ್ಕೆ ಬಂದಿದ್ದು, ಗ್ರಾಮ, ಗ್ರಾಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಹಬಾಳ್ವೆ ನಿರ್ಮಾಣವಾಗಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಡೇನಿಯಲ್ ನಜ್ರತ್ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ಎಂ.ಡಿ, ಪಾಲನಾ ಸಮಿತಿ ಉಪಾಧ್ಯಕ್ಷ ಮಾರ್ಕೋ ಡಿ ಆಲ್ಮೇಡ, ವಕೀಲ ಜೀವನ್ ಪ್ರಕಾಶ್, ಬ್ರದರ್ ಜಾಸ್ವಿನ್ ಪಿರೇರಾ ಉಪಸ್ಥಿತರಿದ್ದರು. ಸಿಇಒ ವಿಲಿಯಂ ಗೋಮ್ಸ್ ವರದಿ ಮಂಡಿಸಿದರು. ನಾಗಶ್ರೀ ಸ್ವಾಗತಿಸಿದರು. ಅನ್ನಪೂರ್ಣ ವಂದಿಸಿದರು. ಅನುರಾಧಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.

ಕೊಠಡಿ, ವ್ಯವಹಾರ ಉದ್ಘಾಟನೆ

ಪಡುಕೋಣೆ ಸೇಂಟ್ ಅಂತೋನಿ ಚರ್ಚ್ ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೋ ಭದ್ರತಾ ಕೊಠಡಿ, ನಿವೃತ್ತ ಯೋಧ ಗಣೇಶ ಹೆಬ್ಬಾರ್ ಮತ್ತು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ ವ್ಯವಹಾರದ ವಿಭಾಗಗಳನ್ನು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net