ರಾಗಿಕೊಪ್ಪ ಗ್ರಾಮದಲ್ಲಿ ನೀರಿನ ಸಮಸ್ಯೆ

 ಶಿರಾಳಕೊಪ್ಪ ಹತ್ತಿರದ ಕೊರಟಿಗೆರೆ ಗ್ರಾಪಂ ಮುಂಭಾಗ ರಾಗಿಕೊಪ್ಪ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಯಂಕ್ಯಾ ನಾಯ್ಕ ಇತರರಿದ್ದರು. ಹನುಮಂತಪ್ಪ, ಲೋಕಪ್ಪ, ಮರಿಯಪ್ಪ, ಹನುಮಂತಪ್ಪ ಅಡ್ಡಿಗಾಲ್ ಇತರರಿದ್ದರು.
ಶಿರಾಳಕೊಪ್ಪ ಹತ್ತಿರದ ಕೊರಟಿಗೆರೆ ಗ್ರಾಪಂ ಮುಂಭಾಗ ರಾಗಿಕೊಪ್ಪ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಯಂಕ್ಯಾ ನಾಯ್ಕ ಇತರರಿದ್ದರು. ಹನುಮಂತಪ್ಪ, ಲೋಕಪ್ಪ, ಮರಿಯಪ್ಪ, ಹನುಮಂತಪ್ಪ ಅಡ್ಡಿಗಾಲ್ ಇತರರಿದ್ದರು.
Published on
ಶಿರಾಳಕೊಪ್ಪ: ತಾಲೂಕಿನ ರಾಗಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ ಮಾಡದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೊರಟಗೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿ ಸಮಸ್ಯೆಗಳ ಬಗ್ಗೆ ಕೇಳಲು ಹೋದ ಸಾರ್ವಜನಿಕರಿಗೆ ಉಡಾೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಆವರಣದಲ್ಲಿ ರಾಗಿಕೊಪ್ಪ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ರಾಗಿಕೊಪ್ಪ ಗ್ರಾಪಂ ಮಾಜಿ ಸದಸ್ಯರಾದ ಯಂಕ್ಯಾ ನಾಯ್ಕ, ಹನುಮಂತಪ್ಪ, ಲೋಕಪ್ಪ, ಮರಿಯಪ್ಪ, ಹನುಮಂತಪ್ಪ ಅಡ್ಡಿಗಾಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net