ತಾಯಿ ಆರೈಕೆ, ಮನುಷ್ಯರ ಕಾಳಜಿ ದೊರೆಯದೆ; ಶಿವಮೊಗ್ಗದಲ್ಲಿ ಜನಿಸಿದ ಕೆಲವೇ ದಿನಗಳಲ್ಲಿ ಪ್ರಾಣಬಿಟ್ಟ ಸಿಂಹಿಣಿಯ 4 ಮರಿಗಳು! Lion Cubs

ಸಾರಾ ಮೊದಲ ಬಾರಿಗೆ ತಾಯಿಯಾಗಿದ್ದ ಹಿನ್ನೆಲೆಯಲ್ಲಿ ಮರಿಗಳ ಆಗಮನ ಸಿಂಹಧಾಮದ ಸಿಬ್ಬಂದಿ ಹಾಗೂ ಪ್ರಾಣಿಪ್ರೇಮಿಗಳಲ್ಲೂ ಸಂತಸ ಮೂಡಿಸಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಉಳಿದಿಲ್ಲ ಎಂಬುದು ವಿಪರ್ಯಾಸ.
Lion Cubs
ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ಸಾರಾ ಸಿಂಹಿಣಿ
Published on: 

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸಿಂಹಿಣಿ ಜನ್ಮ ನೀಡಿದ್ದ ನಾಲ್ಕು ಮರಿಗಳು ( Lion Cubs ) ಕೆಲವೇ ದಿನಗಳಲ್ಲಿ ಮೃತಪಟ್ಟಿತುವುದು ತಡವಾಗಿ ಬೆಳಕಿಗೆ ಬಂದಿದೆ.

ಗುಜರಾತಿನಿಂದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತಂದಿದ್ದ ಸಾರಾ ಹೆಸರಿನ ಸಿಂಹಿಣಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಸಾರಾ ಮೊದಲ ಬಾರಿಗೆ ತಾಯಿಯಾಗಿದ್ದ ಹಿನ್ನೆಲೆಯಲ್ಲಿ ಮರಿಗಳ ಆಗಮನ ಸಿಂಹಧಾಮದ ಸಿಬ್ಬಂದಿ ಹಾಗೂ ಪ್ರಾಣಿಪ್ರೇಮಿಗಳಲ್ಲೂ ಸಂತಸ ಮೂಡಿಸಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಉಳಿದಿಲ್ಲ ಎಂಬುದು ವಿಪರ್ಯಾಸ.

Also Read
ನಿಜವಾಗಿಯೂ ಮನುಷ್ಯನನ್ನು ನುಂಗಬಲ್ಲವೇ ದೈತ್ಯ ಹಾವುಗಳು? ಇಲ್ಲಿದೆ ಅಚ್ಚರಿಯ ವೈಜ್ಞಾನಿಕ ಸತ್ಯ! Snakes
Lion Cubs

ಮರಿಗಳಿಗೆ ತಾಯಿ ಸಿಂಹಿಣಿಯಿಂದ ಸಮರ್ಪಕವಾಗಿ ಹಾಲು ಸಿಗಲಿಲ್ಲ. ಪರಿಣಾಮ ನಾಲ್ಕೂ ಮರಿಗಳು ಕ್ರಮೇಣ ನಿತ್ರಾಣಗೊಳ್ಳತೊಡಗಿದ್ದವು. ಮರಿಗಳಿಗೆ ತಾಯಿಯಿಂದ ಹಾಲು ದೊರೆಯದ ಸಂದರ್ಭದಲ್ಲಿ ಅವುಗಳನ್ನು ಉಳಿಸಿಕೊಳ್ಳಲು ಪೂರಕ ಆಹಾರ ಅಥವಾ ಮಾನವ ಸಹಾಯದಿಂದ ಫೀಡಿಂಗ್ ಮಾಡುವ ಅಗತ್ಯವಿತ್ತು. ಆದರೆ, ಅಗತ್ಯ ಸಮಯದಲ್ಲಿ ಈ ರೀತಿಯ ಪೂರಕ ಆಹಾರ ನೀಡುವ ಕ್ರಮ ಕೈಗೊಳ್ಳದ ಕಾರಣ ಮರಿಗಳ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ನಾಲ್ಕೂ ಮರಿಗಳು ಮೃತಪಟ್ಟಿವೆ.

ಸಾರಾ ಸಿಂಹಿಣಿಗೆ ಮೊದಲ ಗರ್ಭಧಾರಣೆಯಾಗಿತ್ತು. ಮೊದಲ ಬಾರಿಗೆ ಮರಿಗಳಿಗೆ ಜನ್ಮ ನೀಡಿದ್ದ ಸಿಂಹಿಣಿಗಳಲ್ಲಿ ಕೆಲವೊಮ್ಮೆ ನವಜಾತ ಮರಿಗಳನ್ನು ಪೋಷಿಸುವ ಸ್ವಾಭಾವಿಕ ವರ್ತನೆ ಸಮರ್ಪಕವಾಗಿ ವ್ಯಕ್ತವಾಗದಿರುವ ಸಾಧ್ಯತೆ ಇದೆ. ಸಾರಾ ಮರಿಗಳಿಗೆ ಅಗತ್ಯ ಪ್ರಮಾಣದಲ್ಲಿ ಹಾಲುಣಿಸದ ಹಿನ್ನೆಲೆಯಲ್ಲಿ ಅವು ನಿತ್ರಾಣಗೊಂಡಿದ್ದು, ಸೂಕ್ತ ಪೋಷಣೆ ದೊರೆಯದಿರುವುದು ಅವುಗಳ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read
ಬೇರೆ ಬೇರೆ ಜಾತಿಯ 2 ಹಾವುಗಳು ಮುಖಾಮುಖಿಯಾದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ...Snakes
Lion Cubs

ಮರಿಗಳ ಸಾವು ಈ ಮಾಸಾಂತ್ಯದ ಮೂರನೇ ವಾರದಲ್ಲೇ ಸಂಭವಿಸಿದ್ದರೂ ತ್ಯಾವರೆಕೊಪ್ಪ ಸಿಂಹಧಾಮ ಮೃಗಾಲಯ ವ್ಯಾಪ್ತಿಗೆ ಬರುವುದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಟ್ಟಾರೆ ಹೊಸ ಅತಿಥಿಗಳ ಆಗಮನದಿಂದ ಸಿಂಹಧಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಲ್ಲಿದ್ದ ಸಿಬ್ಬಂದಿ ಹಾಗೂ ಪ್ರಾಣಿಪ್ರೇಮಿಗಳಿಗೆ ನಾಲ್ಕೂ ಮರಿಗಳ ಸಾವು ಆಘಾತವನ್ನುಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net