ದಾರ್ಶನಿಕರ ಆದರ್ಶ ದಾರಿದೀಪ

ಸಾಗರದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಕೆಳದಿ ವೆಂಕಟೇಶ ಜೋಯಿಸ್ ಮಾತನಾಡಿದರು. ಎಚ್.ಜೆ.ರಶ್ಮಿ, ಚಂದ್ರಶೇಖರ್, ತೋಯಜಾಕ್ಷಿ, ಕಲ್ಲಪ್ಪ ಮೆಣಸಿನಾಳ್, ವೆಂಕಟೇಶ್ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಕೆಳದಿ ವೆಂಕಟೇಶ ಜೋಯಿಸ್ ಮಾತನಾಡಿದರು. ಎಚ್.ಜೆ.ರಶ್ಮಿ, ಚಂದ್ರಶೇಖರ್, ತೋಯಜಾಕ್ಷಿ, ಕಲ್ಲಪ್ಪ ಮೆಣಸಿನಾಳ್, ವೆಂಕಟೇಶ್ ಇತರರಿದ್ದರು.
Published on
ಸಾಗರ: ಪ್ರತಿಯೊಬ್ಬರಿಗೂ ದಾರ್ಶನಿಕರ ಆದರ್ಶ ದಾರಿದೀಪವಾಗಬೇಕು. ಅವರ ಸಂದೇಶಗಳು ಮನುಕುಲದ ಒಳಿತಿಗೆ ಪ್ರೇರಣೆಯಾಗಿದೆ ಎಂದು ತಹಸೀಲ್ದಾರ್ ಎಚ್.ಜೆ.ರಶ್ಮಿ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ದಾರ್ಶನಿಕ ಸಿದ್ದರಾಮೇಶ್ವರ ಅವರು ಮಾನವಕುಲಕ್ಕೆ ನೀಡಿದ ಕೊಡುಗೆ ಅಪಾರ. ನಮ್ಮ ದಾರ್ಶನಿಕರು, ಸಾಧು-ಸಂತರು, ವೀರಪುರುಷರನ್ನು ನಾವು ಮರೆತಿದ್ದೇವೆ. ಅವರನ್ನು ಜಯಂತಿಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ನಮ್ಮ ಬದುಕಿನಲ್ಲಿ ಅವರ ಆದರ್ಶವನ್ನು ರೂಢಿಸಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಇತಿಹಾಸ ತಜ್ಞ ಡಾ. ಕೆಳದಿ ವೆಂಕಟೇಶ ಜೋಯಿಸ್, ಪ್ರಸ್ತುತ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಸಿದ್ದರಾಮೇಶ್ವರರ ವಚನಗಳು ಮಾನವ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಚಂದ್ರಶೇಖರ್, ತೋಯಜಾಕ್ಷಿ, ನೊಳಂಬ ಸಮಾಜದ ಅಧ್ಯಕ್ಷ ಕಲ್ಲಪ್ಪ ಮೆಣಸಿನಾಳ್, ಭೋವಿ ಸಮಾಜದ ಅಧ್ಯಕ್ಷ ವೆಂಕಟೇಶ್, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ್ ಗುಂಡಾಲಿ, ವಿ.ಟಿ.ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net