ಮಹಿಳೆಯರ ಸ್ವಾವಲಂಬಿ ಬದುಕಿಗೆ ಯೋಜನೆ

ತೀರ್ಥಹಳ್ಳಿಯಲ್ಲಿ ಸೀರೆಗೆ ಕುಚ್ಚು ಕಟ್ಟುವ ಸ್ವ-ಉದ್ಯೋಗ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಜೀವನ್ ಮಾತನಾಡಿದರು. ಡಾನ್ ರಾಮಣ್ಣ ಶೆಟ್ಟಿ, ಪ್ರಭಾಕರ್, ಚಂದ್ರಶೇಖರ್, ರವಿ, ಸರ್ದಾರ್ ಷಫಿ, ಸಂಧ್ಯಾ ಇತರರಿದ್ದರು.
ತೀರ್ಥಹಳ್ಳಿಯಲ್ಲಿ ಸೀರೆಗೆ ಕುಚ್ಚು ಕಟ್ಟುವ ಸ್ವ-ಉದ್ಯೋಗ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಜೀವನ್ ಮಾತನಾಡಿದರು. ಡಾನ್ ರಾಮಣ್ಣ ಶೆಟ್ಟಿ, ಪ್ರಭಾಕರ್, ಚಂದ್ರಶೇಖರ್, ರವಿ, ಸರ್ದಾರ್ ಷಫಿ, ಸಂಧ್ಯಾ ಇತರರಿದ್ದರು.
Published on
ತೀರ್ಥಹಳ್ಳಿ: ಮಹಿಳೆಯರು ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಜತೆಗೆ ಇದಕ್ಕೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಂದ ದೊರೆಯುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿಇಒ ಜ್ಯೋತಿರಾಜ್ ಹೇಳಿದರು.
ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಸಿಯೇಷನ್ ತೀರ್ಥಹಳ್ಳಿ ಘಟಕದ ಸಹಯೋಗದಲ್ಲಿ ಮಂಗಳವಾರ ಆರಂಭವಾದ ಮಹಿಳೆಯರಿಗೆ ಸೀರೆಗೆ ಕುಚ್ಚು ಕಟ್ಟುವ ಸ್ವ-ಉದ್ಯೋಗ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.
ಸರ್ಕಾರದ ಆರ್ಥಿಕ ನೆರವಿನ ಬಗ್ಗೆ ವಿವರಿಸಿ, ತರಬೇತಿಯ ಕೊನೆಯಲ್ಲಿ ಪ್ರಮಾಣಪತ್ರ ನೀಡಲಾಗುವುದು. ಹಿಂದಿನ ವಿಜಯಾ ಬ್ಯಾಂಕ್, ಬ್ಯಾಂಕ್ ಆ್ ಬರೋಡಾದೊಂದಿಗೆ ವಿಲೀನಗೊಳ್ಳುವ ಹಲವಾರು ವರ್ಷಗಳ ಮುನ್ನವೇ ಆರಂಭಗೊಂಡಿರುವ ಈ ಯೋಜನೆಯಲ್ಲಿ ಮಹಿಳೆಯರು ಮಾತ್ರವಲ್ಲದೆ ಜನರ ಸ್ವಾವಲಂಬಿ ಬದುಕಿಗೆ ನೆರವಾಗುವ ಹಲವು ತರಬೇತಿಗಳನ್ನು  ನೀಡಲಾಗುತ್ತಿದೆ ಎಂದರು.
 ಈ ಯೋಜನೆಯಲ್ಲಿ ಪರಿಸರ ರಕ್ಷಣೆಗೂ ಒತ್ತು ನೀಡಲಾಗಿದೆ. ಬ್ಯಾಂಕ್ ಆ್ ಬರೋಡಾದಿಂದ ಸ್ವಉದ್ಯೋಗಕ್ಕೆ ಅಗತ್ಯ ಆರ್ಥಿಕ ನೆರವು ಪಡೆಯಬಹುದು. ಟೈಲರ್ಸ್‌ ಅಸೋಸಿಯೇಷನ್ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ 11 ದಿನಗಳ ಕಾಲ ತೆಂಗಿನ ಚಿಪ್ಪಿನಲ್ಲಿ ಕಲಾಕೃತಿ ರಚನೆ ಬಗ್ಗೆ ತರಬೇತಿ ಶಿಬಿರ ಆರಂಭಿಸಲಾಗುತ್ತಿದೆ ಎಂದರು.      
ರಾಜ್ಯ ಟೈಲರ್ಸ್‌ ಅಸೋಸಿಯೇಷನ್ ಉಪಾಧ್ಯಕ್ಷ ಡಾನ್ ರಾಮಣ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಹಕಾರ್ಯದರ್ಶಿ ರವಿ, ಸದಸ್ಯರಾದ ಸರ್ದಾರ್ ಷಫಿ, ಸಂಧ್ಯಾ ರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net