ರಸ್ತೆ, ಚರಂಡಿ ಕಾಮಗಾರಿಗೆ ರೂ. 7 ಕೋಟಿ ಅನುದಾನ

ಸಾಗರದ ಜೋಸ್ೆ ನಗರದಲ್ಲಿ ನಗರಸಭೆಯಿಂದ ಚರಂಡಿ ಕಾಮಗಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಮಧು ಮಾಲತಿ, ಗಣಪತಿ ಮಂಡಗಳಲೆ, ಎಚ್.ಕೆ.ನಾಗಪ್ಪ, ಮರಿಯಾ ಲೀಮಾ ಇತರರಿದ್ದರು.
ಸಾಗರದ ಜೋಸ್ೆ ನಗರದಲ್ಲಿ ನಗರಸಭೆಯಿಂದ ಚರಂಡಿ ಕಾಮಗಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಮಧು ಮಾಲತಿ, ಗಣಪತಿ ಮಂಡಗಳಲೆ, ಎಚ್.ಕೆ.ನಾಗಪ್ಪ, ಮರಿಯಾ ಲೀಮಾ ಇತರರಿದ್ದರು.
Published on
ಸಾಗರ : ಪಟ್ಟಣ ಸಮಗ್ರ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 5 ಕೋಟಿ ರೂ. ಮೀಸಲಿಡಲಾಗುತ್ತದೆ. ಇದರ ಜತೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆಯಾಗಲಿದ್ದು, ಪಟ್ಟಣದಲ್ಲಿ ಅಗತ್ಯ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಜೋಸ್ೆ ನಗರದಲ್ಲಿ ಮಂಗಳವಾರ ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಗರೋತ್ಥಾನ ಯೋಜನೆಗೆ ಸರ್ಕಾರ ಸಾಕಷ್ಟು ಹಣ ಮಂಜೂರು ಮಾಡುತ್ತಿದೆ. ಈಗಾಗಲೆ ಅಗತ್ಯ ಇರುವ ಕಾಮಗಾರಿಗಳ ಪಟ್ಟಿ ಮಾಡಲಾಗಿದ್ದು ಹಂತಹಂತವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. ಗಣಪತಿ ಕೆರೆ ಪಕ್ಕದ ಶಾಶ್ವತ ಧ್ವಜಸ್ತಂಭದ ಪಕ್ಕ 2 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ, ಮಕ್ಕಳ ಅಟಿಕೆ ಪಾರ್ಕ್ ನಿರ್ಮಿಸಲಾಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿ ುಡ್‌ಕೋರ್ಟ್ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದೆ ಎಂದು ಹೇಳಿದರು.
ಬಿಸಿಲು ವಿಪರೀತ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಸಾಗರ ನಗರದ ವಿವಿಧ ಯೋಜನೆ ಅನುಷ್ಠಾನ ಕುರಿತು ಸದ್ಯದಲ್ಲಿಯೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಸೊರಬ ರಸ್ತೆಯ ಬೈಪಾಸ್‌ನಲ್ಲಿ ಎಪಿಎಂಸಿ ಸಹಯೋಗದೊಂದಿಗೆ ಇನ್ನೊಂದು ಸಂತೆ ಮಾರ್ಕೆಟ್ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ ಎಂದರು. 
ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಮಧುಮಾಲತಿ, ಗಣಪತಿ ಮಂಡಗಳಲೆ, ಮರಿಯಾ ಲೀಮಾ, ಅರ್ಥರ್ ಗೋಮ್ಸ್, ಮಹಾಬಲೇಶ್ವರ ಶೇಟ್, ಮೈಕೆಲ್ ಡಿಸೋಜ, ದಿನೇಶ್ ಡಿ. ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net