ಎರಡು ಕುಟುಂಬಕ್ಕೆ ತಲಾ ರೂ. 5 ಲಕ್ಷ ಪರಿಹಾರ

ಶೃಂಗೇರಿ ತಾಲೂಕು ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಆನೆ ತುಳಿತದಿಂದ ಸಾವಿಗೀಡಾದವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದರು. ಶಿವರಾಂಬಾಬು, ಕುರದಮನೆ ವೆಂಕಟೇಶ್, ಜುಬೇದಾ ಇತರರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ
ಶೃಂಗೇರಿ ತಾಲೂಕು ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಆನೆ ತುಳಿತದಿಂದ ಸಾವಿಗೀಡಾದವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದರು. ಶಿವರಾಂಬಾಬು, ಕುರದಮನೆ ವೆಂಕಟೇಶ್, ಜುಬೇದಾ ಇತರರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ
ಶೃಂಗೇರಿ: ಆನೆ ತುಳಿತದಿಂದ ಮೃತಪಟ್ಟ ಕೆರೆ ಗ್ರಾಪಂ ಕೆರೆಗದ್ದೆಯ ಎರಡು ಕುಟುಂಬದವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಕೆ.ಜೆ.ಜಾರ್ಜ್, ದಾಳಿ ಮಾಡಿದ ಕಾಡಾನೆಯನ್ನು ಹಿಡಿಯಲು ಅರಣ್ಯ ಸಚಿವರು ಆದೇಶಿಸಿದ್ದು ಅರಣ್ಯ ಇಲಾಖೆಯ ತಜ್ಞ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಾಡಾನೆ ದಾಳಿಯಿಂದ ಮೃತಪಟ್ಟ ಜೀವವನ್ನು ವಾಪಸ್ ತರಲಾಗದು. ಇದೊಂದು ದುರಾದೃಷ್ಟಕರ ವಿಷಯ ಎಂದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜನರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದು ಪುನರ್ವಸತಿ ಪ್ಯಾಕೇಜ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಘಟನೆ ನಡೆದ ಅಪಾಯದಲ್ಲಿರುವ 17 ಕುಟುಂಬವನ್ನು ಸ್ಥಳಾಂತರಿಸಲಾಗುವುದು. ನ.17ಕ್ಕೆ ಜನ ಸಂಪರ್ಕ ಸಭೆ ಏರ್ಪಡಿಸಲಾಗುತ್ತದೆ. ಉದ್ಯಾನ ವ್ಯಾಪ್ತಿಯಲ್ಲಿ 538 ಕುಟುಂಬಗಳು ಇದ್ದು ಸ್ಥಳಾಂತರಿಸಲು 300 ಕೋಟಿ ರೂ. ಅಗತ್ಯವಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವ ಅವಶ್ಯಕ. ಹಾಗಾಗಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನೊಂದ ಕುಟುಂಬದ ಒಬ್ಬ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಹರೀಶ್ ಶೆಟ್ಟಿ ಮಗಳ ಚಿಕಿತ್ಸೆಗಾಗಿ ಮಾಸಿಕ 4,000 ರೂ. ಸರ್ಕಾರದಿಂದ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ಎರಡು ಕುಟಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಮ್ ಅಮಟೆ, ಡಾ. ಅಂಶುಮಂತ್, ಕೆ.ಎಂ.ರಮೇಶ್ ಭಟ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net