ಪರಿಸರ ರಕ್ಷಣೆ ಎಲ್ಲರ ಕರ್ತವ್ಯ

ಸಾಗರ ತಾಲೂಕಿನ ಭೀಮನೇರಿಯಲ್ಲಿ ಸಹಕಾರಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಗಣಪತಿ ಸಸಿ ನೆಟ್ಟರು. ಕೃಷ್ಣಮೂರ್ತಿ, ನಿರಂಜನ, ಎಂ.ಕೆ.ದೇವಪ್ಪ, ರಮೇಶ್ ಭಟ್, ಜಯಾ ಆರ್.ಪೈ, ಶಿವಲೀಲಾ, ಶಂಕರಪ್ಪ, ಆಂಜನೇಯ ಇತರರಿದ್ದರು.
ಸಾಗರ ತಾಲೂಕಿನ ಭೀಮನೇರಿಯಲ್ಲಿ ಸಹಕಾರಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಗಣಪತಿ ಸಸಿ ನೆಟ್ಟರು. ಕೃಷ್ಣಮೂರ್ತಿ, ನಿರಂಜನ, ಎಂ.ಕೆ.ದೇವಪ್ಪ, ರಮೇಶ್ ಭಟ್, ಜಯಾ ಆರ್.ಪೈ, ಶಿವಲೀಲಾ, ಶಂಕರಪ್ಪ, ಆಂಜನೇಯ ಇತರರಿದ್ದರು.
Published on
ಸಾಗರ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಸಹಕಾರ ಚಳವಳಿ ಜತೆಗೆ ಪರಿಸರ ಸಂರಕ್ಷಣೆಯನ್ನೂ ನಡೆಸಬೇಕು ಎನ್ನುವ ಉದ್ದೇಶದಿಂದ ಸಹಕಾರ ಸಪ್ತಾಹವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಸಾಗರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಗಣಪತಿ ಹೊನಗಲು ಹೇಳಿದರು.
ತಾಲೂಕಿನ ಭೀಮನೇರಿಯಲ್ಲಿ ಮಂಗಳವಾರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಆಶ್ರಯದಲ್ಲಿ ಸಹಕಾರಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಬಹುತೇಕರು ಕೃಷಿ ಚಟುವಟಿಕೆಯಲ್ಲಿ  ತೊಡಗಿಸಿಕೊಂಡಿರುತ್ತಾರೆ. ಸಹಕಾರಿ ಸಪ್ತಾಹ ಸಂದರ್ಭದಲ್ಲಿ ಪರಿಸರ ಪೂರಕ ಚಟುವಟಿಕೆ ಕೈಗೊಳ್ಳಲು ನಮಗೆ ಇನ್ನಷ್ಟು ಪ್ರೇರಣೆ ಸಿಕ್ಕಂತಾಗಿದೆ. ಪ್ರತಿಯೊಬ್ಬರೂ ಮನೆಗೊಂದು ಗಿಡ ನೆಟ್ಟು ಪೋಷಣೆ ಮಾಡುವಂತಾಗಬೇಕು ಎಂದರು
ಸಹಕಾರ ಯೂನಿಯನ್ ನಿರ್ದೇಶಕ ದಿನೇಶ್ ಬರದವಳ್ಳಿ ಮಾತನಾಡಿ, ಪ್ರಸ್ತುತ ಬೇರೆಬೇರೆ ಕಾರಣಗಳಿಂದ ಪರಿಸರವನ್ನು ನಾಶ ಮಾಡಿದ್ದೇವೆ. ಸಸಿಗಳನ್ನು ನೆಟ್ಟು ಪರಿಸರವನ್ನು ಹಸಿರುಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣಮೂರ್ತಿ, ನಿರಂಜನ, ಎಂ.ಕೆ.ದೇವಪ್ಪ, ರಮೇಶ್ ಭಟ್, ಜಯಾ ಆರ್.ಪೈ, ಶಿವಲೀಲಾ, ಶಂಕರಪ್ಪ, ಆಂಜನೇಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net