ಮಕ್ಕಳನ್ನು ಶಾಲೆಗೆ ಕಳುಹಿಸಲು ಮನವೊಲಿಕೆ

ಸೊರಬದ ಅಂಬೇಡ್ಕರ್ ಬಡಾವಣೆಯ ವಿದ್ಯಾರ್ಥಿ ಮನೆಗೆ ಜಿಪಂ ಸಿಇಒ ಹೇಮಂತಕುಮಾರ್ ಭೇಟಿ ನೀಡಿ ಪಾಲಕರೊಂದಿಗೆ ಮಾತನಾಡುತ್ತಿರುವುದು. ಕೆ.ಸಿ.ಶಶಿಧರ, ಉಷಾ ಇತರರಿದ್ದರು.
ಸೊರಬದ ಅಂಬೇಡ್ಕರ್ ಬಡಾವಣೆಯ ವಿದ್ಯಾರ್ಥಿ ಮನೆಗೆ ಜಿಪಂ ಸಿಇಒ ಹೇಮಂತಕುಮಾರ್ ಭೇಟಿ ನೀಡಿ ಪಾಲಕರೊಂದಿಗೆ ಮಾತನಾಡುತ್ತಿರುವುದು. ಕೆ.ಸಿ.ಶಶಿಧರ, ಉಷಾ ಇತರರಿದ್ದರು.
Published on
ಸೊರಬ: ತಾಲೂಕಿನಾದ್ಯಂತ ಮಿಷನ್ ಸುರಕ್ಷಾ ಯೋಜನೆಯಡಿ ಜಾಗೃತಿ ಅಭಿಯಾನ ಮತ್ತು ಮನೆಮನೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಪಾಲಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸುವ ಕಾರ್ಯ ಮಂಗಳವಾರ ನಡೆಯಿತು.
ಮಿಷನ್ ಸುರಕ್ಷಾ ಯೋಜನೆ, ಜಿಲ್ಲಾಡಳಿತ, ಜಿಪಂ ಹಾಗೂ ತಾಪಂ, ತಾಲೂಕು ಶಿಕ್ಷಣ ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪುರಸಭೆ, ಚಂದ್ರಗುತ್ತಿ, ಆನವಟ್ಟಿ , ಜಡೆ, ಉಳವಿ, ಕುಪ್ಪಗಡ್ಡೆ  ಹೋಬಳಿಯ ಗ್ರಾಪಂ ವ್ಯಾಪ್ತಿಯಲ್ಲಿ ಜಾಥಾ ನಡೆಯಿತು. 
ಪಟ್ಟಣದ ಅಂಬೇಡ್ಕರ್ ಬಡಾವಣೆಯ 9ನೇ ತರಗತಿಯ ಸಂಜಯ್ ಎಂಬ ವಿದ್ಯಾರ್ಥಿ ಶಾಲೆಗೆ ಗೈರಾಗಿದ್ದರಿಂದ ಜಿಪಂ ಸಿಇಒ ಹೇಮಂತಕುಮಾರ್ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಪಾಲಕರ ಜತೆ ಮಾತನಾಡಿ, ಶಾಲೆಗೆ ಕಳಿಸುವಂತೆ  ಮನವೊಲಿಸಿದರು. ಶಾಲೆಗೆ ಗೈರಾಗದಂತೆ ಮತ್ತು ಅಂತಹ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ತಾಪಂ ಇಒ ಕೆ.ಸಿ.ಶಶಿಧರ, ತಾಪಂ ಸಹಾಯಕ ನಿರ್ದೇಶಕ ಡಿ.ಮಂಜಪ್ಪ, ಮುಖ್ಯಾಧಿಕಾರಿ ಎಚ್.ವಿ.ಚಂದನ್, ಕಸಬಾ ವಲಯದ ಇಸಿಒ ಸಂಜೀವ್‌ಕುಮಾರ್, ಶಿವಮೊಗ್ಗ ಮಕ್ಕಳ ಸಹಾಯವಾಣಿ ಅಧಿಕಾರಿ ಉಷಾ, ಸಚಿನ್, ಗಣಪತಿ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net