ಸಾಗರದಲ್ಲಿ ಆಪರೇಷನ್ ಡಾಗ್

ಸಾಗರ ನಗರಸಭೆಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು.
ಸಾಗರ ನಗರಸಭೆಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು.
Published on
ಸಾಗರ: ನಗರ ವ್ಯಾಪ್ತಿಯಲ್ಲಿ ನಾಯಿ ಕಚ್ಚಿದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ನಾಗರಿಕರು ಹಲವು ಬಾರಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
 ರಾತ್ರಿಯಲ್ಲಂತೂ ಜನರು ನಿದ್ದೆ ಮಾಡದಂತೆ ನಾಯಿಗಳು ಬೊಗಳುತ್ತಲೇ ಇರುತ್ತವೆ. ಕಲ್ಯಾಣಮಂಟಪ, ಸರ್ಕಾರಿ ಕಚೇರಿ, ಪಾಳುಬಿದ್ದ ಶಾಲೆಗಳನ್ನು ಆವಾಸ ಸ್ಥಾನ ಮಾಡಿಕೊಂಡಿವೆ.  ಮಕ್ಕಳಿಗೆ, ಸಣ್ಣ ಕರುಗಳಿಗೆ ಬೀದಿ ನಾಯಿಕಚ್ಚಿದ ಪ್ರಕರಣಗಳು ಹೆಚ್ಚುತ್ತಿವೆ. ನಗರಸಭೆ ಗಮನಕ್ಕೂ ಹಲವಾರು ಪ್ರಕರಣಗಳು ಬಂದಿವೆ.
ಇತ್ತೀಚಿಗೆ ಸಾಗರ ನಗರಸಭೆ ವ್ಯಾಪ್ತಿಯ ಕೋರ್ಟ್ ರಸ್ತೆಯ ಆಟೋ ಚಾಲಕನಿಗೆ ಬೀದಿ ನಾಯಿಯೊಂದು ಕಚ್ಚಿ ತೀವ್ರ ಸಮಸ್ಯೆಗೆ ಒಳಗಾಗಿದ್ದರು. ತಮ್ಮ ಹಣದಿಂದಲೇ ಶುಶ್ರೂಷೆ ಪಡೆದರೇ ಹೊರತು ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಸಹಕಾರ ದೊರೆತಿಲ್ಲ. ಪಾದಚಾರಿಗಳ ಮೇಲೆ ದಿಢೀರ್ ದಾಳಿ ನಡೆಸುತ್ತಿವೆ. ಮನೆ ಮುಂದೆಯೇ ಗುಂಪುಗುಂಪಾಗಿ ನಾಯಿಗಳು ನಿಲ್ಲುವುದು ನಾಗರಿಕರಲ್ಲಿ ಭೀತಿ ಮೂಡಿಸಿದೆ. ಅಲ್ಲದೆ ದನ, ಕರುಗಳಿಗೆ ಬೀದಿನಾಯಿಗಳು ಕಚ್ಚಿ ಸಮಸ್ಯೆ ಉಂಟು ಮಾಡಿದ್ದು, ಅಂತಹ ಹಸುಗಳಿಗೆ ಶುಶ್ರೂಷೆ ಕೊಡಿಸುವ ಪ್ರಯತ್ನವನ್ನು ಗೋಸೇವಕರು ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net