ಜಲಾಶಯದಲ್ಲಿ ಸಂಗ್ರಹವಿರುವ ಪೂರ್ಣ ಪ್ರಮಾಣದ ನೀರನ್ನು ಬಳಸಿಕೊಂಡಲ್ಲಿ ಇನ್ನೂ ಒಟ್ಟು 831.88 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಸೋಮವಾರ ಶರಾವತಿಯಲ್ಲಿ 12.15 ಮಿಲಿಯನ್, ಲಿಂಗನಮಕ್ಕಿಯಲ್ಲಿ 0.25 ಮಿಲಿಯನ್ ಹಾಗೂ ಮಹಾತ್ಮ ಗಾಂಧಿ ವಿದ್ಯುದಾಗಾರದಲ್ಲಿ 1.594 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಕಳೆದ ವಷರ್ದ 2025ರ ಏಪ್ರಿಲ್‌ನಿಂದ 2026ರ ಏಪ್ರಿಲ್‌ವರೆಗೆ ಲಿಂಗನಮಕ್ಕಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರಿನಿಂದ ಶರಾವತಿ ವಿದ್ಯುದಾಗಾರದಲ್ಲಿ ಒಟ್ಟು 6100.692 ಮಿಲಿಯನ್ ಯೂನಿಟ್, ಲಿಂಗನಮಕ್ಕಿ ಪವರ್ ಹೌಸ್‌ನಲ್ಲಿ 199.38 ಮಿಲಿಯನ್, ಮಹಾತ್ಮ ಗಾಂಧಿ ವಿದ್ಯುದಾಗಾರದಲ್ಲಿ 697.23 ಮಿಲಿಯನ್ ಹಾಗೂ ಗೇರುಸೊಪ್ಪದಲ್ಲಿ 686.54 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಶರಾವತಿಯ ಎಲ್ಲ ಘಟಕಗಳು ಸುಸ್ತಿಯಲ್ಲಿದ್ದು ಮುಂಗಾರು ಆರಂಭಕ್ಕೂ ಪೂರ್ವದಲ್ಲಿ ಎಲ್ಲದರ ನಿರ್ವಹಣೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಿಡ್‌ನ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸುವ ಜತೆಗೆ ನೀರನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.