ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ನಾಬಳ ಗ್ರಾಮದಲ್ಲಿ ಜನಿಸಿ ಭದ್ರಾವತಿ ತಾಲೂಕಿನ ಅಶೋಕನಗರವನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡಿದ್ದ ಸುಂದರೇಶ್ ಅವರು ರೈತರ ಧ್ವನಿಯಾಗಿ ಹೋರಾಟಗಳನ್ನು ನಡೆಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದದ್ದು ಮಾತ್ರವಲ್ಲದೆ ರಾಜ್ಯಾದ್ಯಂತ ರೈತರನ್ನು ಒಗ್ಗೂಡಿಸಿ ಅವರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ್ದರು. ಸದಾ ಬೆನ್ನು ಬಾಗಿಸಿಕೊಂಡು ಅಧಿಕಾರಶಾಹಿಯ ಎದುರು ಕೈಕಟ್ಟಿ ನಿಲ್ಲುತ್ತಿದ್ದ ರೈತರು ಇಂದು ಎದೆಯುಬ್ಬಿಸಿ ಹೋರಾಡಲು ನಾಲ್ಕು ದಶಕಗಳ ಕಾಲ ಸುಂದರೇಶ್ ರೂಪಿಸಿದ ಚಳವಳಿಗಳೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.