ಅಡಕೆಯಲ್ಲಿ ಔಷಧೀಯ ಗುಣ

ಸಾಗರದ ಪ್ರವಾಸಿ ಮಂದಿರದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ. ವಿಘ್ನೇಶ್ ಮಾತನಾಡಿದರು. ಡಾ. ಆದಿತ್ಯ ಹೆಗಡೆ, ಡಾ. ರವಿಕುಮಾರ್, ಡಾ. ಆತ್ರೇಯ, ಡಾ. ಜೀವನ್, ಡಾ. ಶಶಿಧರ್ ಇತರರಿದ್ದರು.
ಸಾಗರದ ಪ್ರವಾಸಿ ಮಂದಿರದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ. ವಿಘ್ನೇಶ್ ಮಾತನಾಡಿದರು. ಡಾ. ಆದಿತ್ಯ ಹೆಗಡೆ, ಡಾ. ರವಿಕುಮಾರ್, ಡಾ. ಆತ್ರೇಯ, ಡಾ. ಜೀವನ್, ಡಾ. ಶಶಿಧರ್ ಇತರರಿದ್ದರು.
Published on
 ಸಾಗರ:  ಮಲೆನಾಡಿನ ಜೀವನಾಡಿ ಅಡಕೆ. ಇದೀಗ ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗೆ ರೋಗಬಾಧೆ ಕಂಡು ಬಂದಿದ್ದರೆ, ಇನ್ನೊಂದೆಡೆ ಅಡಕೆ ಕಾನೂನು ಸಂಕಷ್ಟ ಎದುರಿಸುವಂತೆ ಆಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಿಘ್ನೇಶ್ ಹೇಳಿದರು.
ಸಾಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಅಡಕೆ ಹಾನಿಕಾರಕವಲ್ಲ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಅಡಕೆ ಬೆಳೆಗಾರ ಸುಧಾರಿಸಿಕೊಳ್ಳಲಾಗದಷ್ಟು ಸಂಕಷ್ಟ ಎದುರಾಗುತ್ತಿದೆ. ಶರಾವತಿ ಕಣಿವೆಯ ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ಎಲೆಚುಕ್ಕೆ ರೋಗದಿಂದ ಬೆಳೆಗಾರ ಕಂಗಾಲಾಗಿದ್ದಾನೆ. ಇದರ ಜತೆಗೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಅಂಶ ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಅಡಕೆ ಸೇವನೆ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಅಡಕೆ ಜತೆಗೆ ತಂಬಾಕು, ಆಲ್ಕೋಹಾಲ್‌ನಂತಹ ವಸ್ತು ಬೆರೆತಾಗ ಮಾತ್ರ ಅಡಕೆ ಮಾರಕವಾಗಬಹುದು. ಅಡಕೆ ಬೆಳೆ ಮೇಲೆ ಅನಗತ್ಯವಾಗಿ ದೂರುವುದು ನಿಲ್ಲಬೇಕು ಎಂದರು.
ಪ್ರಾಚೀನ ಕಾಲದಿಂದಲೂ ಅಡಕೆ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಂಡು ಬಂದ ಅನೇಕ ಉದಾಹರಣೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸಹ ಇದನ್ನು ಸ್ಪಷ್ಟೀಕರಿಸಿದೆ. ಅಡಕೆಯಲ್ಲಿ ಔಷಧೀಯ ಗುಣ ಇದೆ. ಅಡಕೆ ಹಾನಿಕಾರಕ ಅಲ್ಲ ಎನ್ನುವುದನ್ನು ನಾವು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದರು.
ಸಭೆಯಲ್ಲಿ ವಿಜ್ಞಾನಿಗಳಾದ ಡಾ. ಆದಿತ್ಯ ಹೆಗಡೆ, ಡಾ. ರವಿಕುಮಾರ್, ಡಾ. ಆತ್ರೇಯ, ಡಾ. ಜೀವನ್, ಡಾ. ಶಶಿಧರ್, ಪ್ರಮುಖರಾದ ಬಿ.ಆರ್.ಜಯಂತ್, ಗಣಪತಿ, ಯು.ಎಚ್.ರಾಮಪ್ಪ, ಎಲ್.ಟಿ.ತಿಮ್ಮಪ್ಪ, ಚೇತನರಾಜ್ ಕಣ್ಣೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net