ಮೀನುಗಾರರು ಆರ್ಥಿಕ ಸಬಲರಾಗಲಿ

ಭದ್ರಾವತಿ ತಾಲೂಕಿನ ಮೀನುಗಾರರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ತೆಪ್ಪ, ಅರಿಗೋಲು ಸೇರಿದಂತೆ ಮೀನುಗಾರಿಕಾ ಪರಿಕರಗಳನ್ನು ವಿತರಿಸಿದರು. ಷಡಕ್ಷರಿ, ಶಿವಕುಮಾರ್, ಬಿ.ಎಸ್.ಗಣೇಶ್, ಕೆ.ಮುರುಗನ್ ಹಲವರಿದ್ದರು.
ಭದ್ರಾವತಿ ತಾಲೂಕಿನ ಮೀನುಗಾರರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ತೆಪ್ಪ, ಅರಿಗೋಲು ಸೇರಿದಂತೆ ಮೀನುಗಾರಿಕಾ ಪರಿಕರಗಳನ್ನು ವಿತರಿಸಿದರು. ಷಡಕ್ಷರಿ, ಶಿವಕುಮಾರ್, ಬಿ.ಎಸ್.ಗಣೇಶ್, ಕೆ.ಮುರುಗನ್ ಹಲವರಿದ್ದರು.
Published on
ಭದ್ರಾವತಿ: ತಾಲೂಕಿನ ಒಟ್ಟು 35 ಜನ ಮೀನುಗಾರರಿಗೆ ಮೀನುಗಾರಿಕಾ ಇಲಾಖೆಯಿಂದ ಮಂಗಳವಾರ ತೆಪ್ಪ, ಅರಿಗೋಲು ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ನೀಡಲಾಯಿತು.
ಶಾಸಕ ಬಿ.ಕೆ.ಸಂಗಮೇಶ್ವರ್ ಅರ್ಹ ಲಾನುಭವಿಗಳಿಗೆ ಮೀನುಗಾರಿಕೆಯ ಪರಿಕರಗಳನ್ನು ವಿತರಿಸಿ ಮಾತನಾಡಿ, ಮೀನುಗಾರರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದರು.
 ಮೀನುಗಾರಿಕಾ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಷಡಕ್ಷರಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮೀನುಗಾರರಿಗೆ ಮಾರಾಟ ಮಾಡಲು ಹಾಗೂ ಸಗಟು ವ್ಯಾಪಾರಕ್ಕಾಗಿ ನಗರದ ಕವಲುಗುಂದಿ ಗ್ರಾಮದ ಬಳಿ 26 ಕೋಟಿ ರೂ. ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲು ಸರ್ಕಾರದ ಅನುಮತಿ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಗಣೇಶ್, ಕೆ.ಮುರುಗನ್ ಹಲವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net