26ರಂದು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ

ಸಂದೀಪ್ ಗೋಣಿ
ಸಂದೀಪ್ ಗೋಣಿ
Published on
ಶಿಕಾರಿಪುರ: ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ 25 ಜೋಡಿ ಕುಸ್ತಿ ಪಂದ್ಯಾವಳಿಯನ್ನು ಜ.26ರಂದು ಶಿಕಾರಿಪುರದ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರದ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಪುನೀತ್ ಅಭಿಮಾನಿಗಳು ಮತ್ತು ಕುಸ್ತಿ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಗೋಣಿ ಸಂದೀಪ್ ಹೇಳಿದರು.
ಜೋಡಿ ಕುಸ್ತಿಯಲ್ಲಿ ರಷ್ಯಾದ ಕಜಕಿಸ್ತಾನದಿಂದ ಅಂತಾರಾಷ್ಟ್ರೀಯ ಕುಸ್ತಿಪಟು ಜಾನ್, ನೇಪಾಳದಿಂದ ದೇವತಾಪ್ ಸೇರಿ ವಿವಿಧೆಡೆಯಿಂದ ಪ್ರಸಿದ್ಧ ಕುಸ್ತಿಪಟುಗಳು ಆಗಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬೇರೆ ದೇಶಗಳ ಖ್ಯಾತ ಕುಸ್ತಿಪಟುಗಳು ಶಿಕಾರಿಪುರಕ್ಕೆ ಆಗಮಿಸುತ್ತಿದ್ದಾರೆ. ಕಳೆದ ಮೂರು ವಷರ್ಗಳಿಂದ ಪುನೀತ್‌ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಸ್ತಿ ಪಂದ್ಯದಲ್ಲಿ ವಿಜೇತ ಕುಸ್ತಿಪಟುಗಳಿಗೆ ಮೊದಲ ಬಹುಮಾನ 3 ಲಕ್ಷ ರೂ., ದ್ವಿತೀಯ 1.5 ಲಕ್ಷ ರೂ., 3ನೇ ಬಹುಮಾನ 1 ಲಕ್ಷ ರೂ. ಮತ್ತು ಆಕಷರ್ಕ ಟ್ರೋಫಿ ನೀಡಲಾಗುವುದು. ನಂತರ ನಾಲ್ಕು ಜೋಡಿ ಕುಸ್ತಿಪಟುಗಳಿಗೆ ನಾಲ್ಕನೇಯ ಬಹುಮಾನ 75 ಸಾವಿರ ರೂ, 5ನೇ ಬಹುಮಾನ (26ರಂದು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ
ಶಿಕಾರಿಪುರ: ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ 25 ಜೋಡಿ ಕುಸ್ತಿ ಪಂದ್ಯಾವಳಿಯನ್ನು ಜ.26ರಂದು ಶಿಕಾರಿಪುರದ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರದ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಪುನೀತ್ ಅಭಿಮಾನಿಗಳು ಮತ್ತು ಕುಸ್ತಿ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಗೋಣಿ ಸಂದೀಪ್ ಹೇಳಿದರು.
ಜೋಡಿ ಕುಸ್ತಿಯಲ್ಲಿ ರಷ್ಯಾದ ಕಜಕಿಸ್ತಾನದಿಂದ ಅಂತಾರಾಷ್ಟ್ರೀಯ ಕುಸ್ತಿಪಟು ಜಾನ್, ನೇಪಾಳದಿಂದ ದೇವತಾಪ್ ಸೇರಿ ವಿವಿಧೆಡೆಯಿಂದ ಪ್ರಸಿದ್ಧ ಕುಸ್ತಿಪಟುಗಳು ಆಗಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬೇರೆ ದೇಶಗಳ ಖ್ಯಾತ ಕುಸ್ತಿಪಟುಗಳು ಶಿಕಾರಿಪುರಕ್ಕೆ ಆಗಮಿಸುತ್ತಿದ್ದಾರೆ. ಕಳೆದ ಮೂರು ವಷರ್ಗಳಿಂದ ಪುನೀತ್‌ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಸ್ತಿ ಪಂದ್ಯದಲ್ಲಿ ವಿಜೇತ ಕುಸ್ತಿಪಟುಗಳಿಗೆ ಮೊದಲ ಬಹುಮಾನ 3 ಲಕ್ಷ ರೂ., ದ್ವಿತೀಯ 1.5 ಲಕ್ಷ ರೂ., 3ನೇ ಬಹುಮಾನ 1 ಲಕ್ಷ ರೂ. ಮತ್ತು ಆಕಷರ್ಕ ಟ್ರೋಫಿ ನೀಡಲಾಗುವುದು. ನಂತರ ನಾಲ್ಕು ಜೋಡಿ ಕುಸ್ತಿಪಟುಗಳಿಗೆ ನಾಲ್ಕನೇಯ ಬಹುಮಾನ 75 ಸಾವಿರ ರೂ, 5ನೇ ಬಹುಮಾನ (5 ಜೋಡಿ ಕುಸ್ತಿಪಟುಗಳಿಗೆ) 45 ಸಾವಿರ ರೂ, 6ನೇ ಬಹುಮಾನ 5 ಜೋಡಿಗಳಿಗೆ 35 ಸಾವಿರ ರೂ., 7ನೇ ಬಹುಮಾನ 5 ಜೋಡಿಗಳಿಗೆ 25 ಸಾವಿರ ರೂ. ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಎಂ.ಶ್ರೀಕಾಂತ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮತ್ತಿತರರು ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅರ್ಜುನ್, ರಾಘವೇಂದ್ರ, ಗಿಡ್ಡಪ್ಪ ಮಟ್ಟೇರ್, ರಮೇಶ್, ನವೀನ್ ಶೆಟ್ಟಿ, ಸುಹಾಸ್ ಭಟ್ಟ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net