ಹಿಂದಿಗೆ ಗ್ರೇಡಿಂಗ್ ಅವೈಜ್ಞಾನಿಕ

ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ವಿಷಯದ ಫಲಿತಾಂಶದಲ್ಲಿ ಗ್ರೇಡಿಂಗ್ ನೀಡುವ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿ ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಹಸೀಲ್ದಾರ್ ಭರತ್‌ರಾಜ್‌ಗೆ ಮನವಿ ಸಲ್ಲಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ವಿಷಯದ ಫಲಿತಾಂಶದಲ್ಲಿ ಗ್ರೇಡಿಂಗ್ ನೀಡುವ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿ ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಹಸೀಲ್ದಾರ್ ಭರತ್‌ರಾಜ್‌ಗೆ ಮನವಿ ಸಲ್ಲಿಸಿದರು.
Published on
ಹೊಸನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯದ ಅಂಕಗಳನ್ನು ಅಂತಿಮ ಪರೀಕ್ಷೆಯಲ್ಲಿ ಪರಿಗಣಿಸದಿರಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿ ಹೊಸನಗರ ಪದವಿಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳು ಮಂಗಳವಾರ ತಹಸೀಲ್ದಾರ್ ಭರತ್‌ರಾಜ್‌ಗೆ ಮನವಿ ಸಲ್ಲಿಸಿದರು.
ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಏಕಪಕ್ಷೀಯವಾಗಿದೆ. ವಿದ್ಯಾರ್ಥಿಗಳ ಸಮಗ್ರ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೃತೀಯ ಭಾಷೆಯು ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ವೃದ್ಧಿಸುವುದಲ್ಲದೆ ವಿವಿಧ ಸಂಸ್ಕೃತಿಗಳ ಅರಿವು ಮತ್ತು ಸಂವಹನ ಕೌಶಲಗಳನ್ನು ಬೆಳೆಸಲು ಸಹಕಾರಿ ಆಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
 ನಾವು ಕಲಿಯುವ ಮೂರೂ ಭಾಗಗಳಿಗೂ ಸರಿ ಸಮನಾದ ಮಾನ್ಯತೆ ನೀಡುವುದು ಶೈಕ್ಷಣಿಕವಾಗಿ ನ್ಯಾಯಸಮ್ಮತ. ನಾವು ತರಗತಿಯಲ್ಲಿ ಕಲಿತ ಎಲ್ಲ ವಿಷಯಗಳಿಗೆ ಸಂಬಂಧಿಸಿ ಪರೀಕ್ಷೆ ನಡೆಸಿ ಅಂಕಗಳ ಆಧಾರದಲ್ಲಿ ಲಿತಾಂಶ ನೀಡುವುದು ಶಿಕ್ಷಣ ವ್ಯವಸ್ಥೆಯ ಕ್ರಮ. ಆದರೆ ತೃತೀಯ ಭಾಷೆಯ ಕುರಿತು ಅಂಕಗಳ ಆಧಾರದಲ್ಲಿ ಲಿತಾಂಶ ನೀಡದೆ, ಗ್ರೇಡಿಂಗ್ ಮೂಲಕ ಲಿತಾಂಶ ಕೊಡುವ ಕುರಿತಾದ ನಿರ್ಧಾರ ತಾರತಮ್ಯದಿಂದ ಕೂಡಿದೆ. ಅಲ್ಲದೆ ಮಕ್ಕಳ ಹಕ್ಕನ್ನು ಮೊಟಕುಗೊಳಿಸಿದಂತೆ ಎಂದು ಆರೋಪಿಸಿದರು.
ಗ್ರೇಡಿಂಗ್ ವ್ಯವಸ್ಥೆ ಬೇಕು ಎಂದು ವಿದ್ಯಾರ್ಥಿಗಳು, ಪಾಲಕರು ಅಥವಾ ಆಡಳಿತ ಮಂಡಳಿಯಿಂದ ಯಾವುದೇ ಬೇಡಿಕೆ ಇರಲಿಲ್ಲ. ಆದರೂ ಯಾವುದೋ ಪ್ರಭಾವಕ್ಕೆ ಒಳಗಾಗಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಶಿಕ್ಷಣ ನೀತಿಯನ್ನು ಬದಲಿಸುವುದು ನ್ಯಾಯಸಮ್ಮತವಲ್ಲ. ಪ್ರಸ್ತುತ ಇರುವ ನಿಯಮವನ್ನು ಬದಲಾಯಿಸಬೇಕೆಂದು ಯಾವ ಸಮಿತಿಯೂ ವರದಿ ನೀಡಲಿಲ್ಲ. ಬೇರೆ ವಿಷಯಕ್ಕೆ ಇಲ್ಲದ ಗ್ರೇಡಿಂಗ್ ತೃತೀಯ ಭಾಷೆಗೆ ಮಾತ್ರ ಏಕೆ? ಶಿಕ್ಷಣದಲ್ಲಿ ನಮಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ, ಫಲಿತಾಂಶ ಪಡೆಯುವುದು ಮಕ್ಕಳ ಹಕ್ಕು ಎಂದು ಪ್ರತಿಪಾದಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net