ಎರಡು ತಿಂಗಳಲ್ಲಿ ಎಲ್ಲ ಗ್ರಾಪಂಗಳಿಗೂ ಅನುದಾನ ನೀಡುವ ಮೂಲಕ ರಸ್ತೆ ಕಾಮಗಾರಿ, ಕುಡಿವ ನೀರು, ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ತಾಲೂಕಿನ ಹೆಸರೆ, ಕುಪ್ಪಗಡ್ಡೆ ಗ್ರಿಡ್‌ಗಳಿಗೆ ಅನುದಾನ ಬಿಡುಗಡೆಯಾಗಿದ್ದು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದರಿಂದ ಉಳವಿ ಹೋಬಳಿಯ ಹೆಸರೆ, ಶ್ಯಾಡಲಕೊಪ್ಪ, ಇಂಡೀಹಳ್ಳಿ ಹಾಗೂ ಕುಪ್ಪಗಡ್ಡೆ ಹೋಬಳಿ ಭಾಗದ ರೈತರು ವಿದ್ಯುತ್ ಸಮಸ್ಯೆಯಿಂದ ಮುಕ್ತರಾಗಲಿದ್ದಾರೆ. ಅಧಿಕಾರಿಗಳು ರಸ್ತೆ ಕಾಮಗಾರಿಗಳನ್ನು ಸಾರ್ವಜನಿಕರ, ಗ್ರಾಮಸ್ಥರ ಸಲಹೆ ಮೇರೆಗೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಸಹಕಾರ ಪಡೆದು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.