ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯ

ಸೊರಬ ಉಳವಿ ಹೋಬಳಿಯ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೊರಬ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಂಜುನಾಥ ಗೌಡ, ಉಮೇಶ್ ಪಾಟೀಲ್, ಮಂಜು, ಈಶ್ವರಪ್ಪ ಇತರರಿದ್ದರು.

Published on
ಸೊರಬ: ಉಳವಿ ಹೋಬಳಿಯ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ತಾಲೂಕು ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಸೊರಬ ಮೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಸಹಾಯ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ ಸಲ್ಲಿದರು.
ತಾಲೂಕಿನ ಉಳವಿ ಹೋಬಳಿಯ ಶಿಗ್ಗಾ, ತಳೆಬೈಲು, ಕುಂದಗಸವಿ, ಹೊಸೂರು, ಹಾಲಗಳಲೆ ಸೇರಿದ ಹಲವು ಗ್ರಾಮಗಳಿಗೆ ಐಪಿಸೆಟ್ ಹಾಗೂ ನಿರಂತರ ಜ್ಯೋತಿ ವಿದ್ಯುತ್‌ನ್ನು ಕೆಲದಿನಗಳಿಂದ ಸರಿಯಾಗಿ ಪೂರೈಸುತ್ತಿಲ್ಲ. ಟಿಸಿ ಸುಟ್ಟು ಹೋದರೆ ಶೀಘ್ರ ದುರಸ್ತಿಪಡಿಸುತ್ತಿಲ್ಲ. ಈ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು. 15 ದಿನದಲ್ಲಿ ವ್ಯವಸ್ಥೆ ಸುಧಾರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಗೌರವಾಧ್ಯಕ್ಷ ಮಂಜುನಾಥ ಗೌಡ, ಉಪಾಧ್ಯಕ್ಷ ಉಮೇಶ್ ಪಾಟೀಲ್, ಜಿಲ್ಲಾಧ್ಯಕ್ಷ ಮಂಜು, ತಾಲೂಕು ಅಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಭಾಸ್ಕರ್, ಶಿವಮೂರ್ತಿ, ನಾಗರಾಜ್, ಸೋಮಶೇಖರ್, ಹಿರಿಯಪ್ಪ, ಲೇಖಪ್ಪ, ಜಾವೂರ್, ಫಕೀರಸ್ವಾಮಿ, ಬಾಷಾಸಾಬ್, ಹುಚ್ಚಪ್ಪ, ಹನುಮಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net