ಜೋಗದಿಂದ ಇದೇ ರಸ್ತೆ ಮುಂದೆ ವಡನಬೈಲು ಶ್ರೀ ಬಳೆ ಪದ್ಮಾವತಿ ಅಮ್ಮನ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾಗಿದ್ದು, ನಿತ್ಯ ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ವಾಹನದ ಚಕ್ರದ ನೀರು ಗ್ರಾಮಸ್ಥರು, ಬೈಕ್‌ಗಳಲ್ಲಿ ಓಡಾಡುವವರಿಗೆ ಸಿಡಿಯುತ್ತದೆ. ಅಲ್ಲದೆ ಮಳೆ ಜೋರಾದ ಸಂದರ್ಭದಲ್ಲಿ ಚರಂಡಿ ಸಂಪರ್ಕವಿಲ್ಲದೆ ನೀರು ರಸ್ತೆಯಲ್ಲಿ ಎತ್ತರದ ಮಟ್ಟದಲ್ಲಿ ನಿಂತು ಈ ಜಾಗದಲ್ಲಿ ಓಡಾಡುವುದೇ ಕಷ್ಟವಾಗಿ ಪರಿಣಮಿಸುತ್ತದೆ.