22ಕ್ಕೆ ಡಾ. ರಾಜ್ ದೇಗುಲ ಅನಾವರಣ

ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು,ಎಸ್.ಕುಮಾರ್, ಜಾರ್ಜ್, ಅರ್ಪಿತ್‌ಕುಮಾರ್, ಜಿ.ಕೆ.ದೇವೇಂದ್ರ, ರವಿಕುಮಾರ್, ಸಿ.ಜಯಪ್ಪ, ಗೋಪಿ, ವೆಂಕಟೇಶ್, ದಶರಥಗಿರಿ, ಲೋಕೇಶ್ ಇದ್ದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು,ಎಸ್.ಕುಮಾರ್, ಜಾರ್ಜ್, ಅರ್ಪಿತ್‌ಕುಮಾರ್, ಜಿ.ಕೆ.ದೇವೇಂದ್ರ, ರವಿಕುಮಾರ್, ಸಿ.ಜಯಪ್ಪ, ಗೋಪಿ, ವೆಂಕಟೇಶ್, ದಶರಥಗಿರಿ, ಲೋಕೇಶ್ ಇದ್ದರು.
Published on
ಭದ್ರಾವತಿ: ಬಿ.ಎಚ್.ರಸ್ತೆ ಚಾಮೇಗೌಡ ಏರಿಯಾದಲ್ಲಿ ನಿರ್ಮಿಸಿರುವ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆಯ ದೇಗುಲ ಅನಾವರಣ ಕಾರ್ಯಕ್ರಮ ಜ.22ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ರಾಜ್‌ಕುಮಾರ್ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ದೇಗುಲವನ್ನು 14*30 ಅಳತೆಯ ಜಾಗದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್ ಹಾಗೂ ಅಭಿಮಾನಿಗಳ ಸಂಘದ ಪ್ರಯತ್ನ ಸಾಕಷ್ಟಿದೆ ಎಂದರು.
ಸಮಾಜಕ್ಕೆ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕೊಡುಗೆ ಅಪಾರ. ಅವರ ನೆನಪುಗಳು ಚಿರಸ್ಥಾಯಿ ಆಗಬೇಕು ಎಂಬ ಉದ್ದೇಶದಿಂದ 10 ಲಕ್ಷ ರೂ. ವೆಚ್ಚದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ ದೇಗುಲದ ನಿರ್ಮಾಣಕ್ಕೆ 40 ಲಕ್ಷ ರೂ. ಖರ್ಚು ಮಾಡಲಾಗಿದೆ. ಪುತ್ಥಳಿಯನ್ನು ಉಜ್ಜನೀಪುರದ ವಿಷ್ಣು ನಿರ್ಮಿಸಿದ್ದಾರೆ ಎಂದರು.
 ಕಾರ್ಯಕ್ರಮ ಉದ್ಘಾಟನೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ನಗರಸಭಾ ಸದಸ್ಯ ಬಿ.ಕೆ.ಮೋಹನ್ ಭಾಗವಹಿಸಲಿದ್ದಾರೆ.  ಅಂದು ಸಂಜೆ 7ಕ್ಕೆ ಬೆಂಗಳೂರಿನ ರಾಜ್ ಮೆಲೋಡಿ ಮೇಕರ್ಸ್‌ ತಂಡದಿಂದ ಆರ್ಕೇಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರಮುಖರಾದ ಎಸ್.ಕುಮಾರ್, ಜಾರ್ಜ್, ಅರ್ಪಿತ್‌ಕುಮಾರ್, ಜಿ.ಕೆ.ದೇವೇಂದ್ರ, ರವಿಕುಮಾರ್, ಸಿ.ಜಯಪ್ಪ, ಗೋಪಿ, ವೆಂಕಟೇಶ್, ದಶರಥಗಿರಿ, ಲೋಕೇಶ್, ಲಲಿತಕುಮಾರ್, ಎಲ್.ಶಂಕರ್. ನಾಗರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net