ಉದ್ರಿಕ್ತ ಸ್ಥಳೀಯರಿಂದ ಕ್ವಾರಂಟೈನ್​ ಕೇಂದ್ರ ಧ್ವಂಸ: ಪೊಲೀಸರಿಂದ ಲಘು ಲಾಠಿ ಪ್ರಹಾರ!

Quarantain
Published on

ಶಿವಮೊಗ್ಗ: ಉದ್ರಿಕ್ತ ಸ್ಥಳೀಯರು ಕರೊನಾ ವೈರಸ್​ ಕ್ವಾರಂಟೈನ್​ ಕೇಂದ್ರವನ್ನು ಧ್ವಂಸ ಮಾಡಿರುವ ಘಟನೆ ಶಿವಮೊಗ್ಗದಿಂದ ಗುರುವಾರ ವರದಿಯಾಗಿದೆ.

ಬಾಪೂಜಿ ನಗರದಲ್ಲಿರುವ ಕ್ವಾರಂಟೇನ್ ಕೇಂದ್ರವನ್ನು ಅಲ್ಲಿನ ಸ್ಥಳೀಯರು ಧ್ವಂಸ ಮಾಡಿದ್ದಾರೆ. ಈ ವೇಳೆ ಸ್ಥಳೀಯರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಅಂದಹಾಗೆ ಕ್ವಾರಂಟೈನ್​ ಕೇಂದ್ರವನ್ನು ಬಾಪೂಜಿ‌ ನಗರದಲ್ಲಿರುವ ಬಿ.ಕೃಷ್ಣಪ್ಪ‌ ಹಾಸ್ಟೆಲ್​ನಲ್ಲಿ‌ ಆರಂಭಿಸಲಾಗಿದೆ. ಕರೊನಾ ಭೀತಿಯಿಂದ ಕ್ವಾರಂಟೈನ್​ ಕೇಂದ್ರವನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.

ಹಾಸ್ಟೆಲ್‌ ವಾರ್ಡನ್ ದೂರಿನ ಅನ್ವಯ ಸರ್ಕಾರಿ ಆಸ್ತಿ-ಪಾಸ್ತಿ ನಷ್ಟ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟುಮಾಡಿದ ಅಡಿಯಲ್ಲಿ ಗಲಾಟೆ ಮಾಡಿದವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net