ಶಿಗ್ಗಾಂವಿ ಉಪಚುನಾವಣೆ: ಬಿಗ್‌ಬಾಸ್​ ಸ್ಪರ್ಧಿ ಹನುಮಂತ ಲಮಾಣಿ ಮತದಾನಕ್ಕೆ ಗೈರು, ತಂದೆ ಹೇಳಿದ್ದಿಷ್ಟು... Hanumantha Lamani

Hanumantha Lamani
Published on

ಹಾವೇರಿ/ಸವಣೂರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವೀಪ್ ರಾಯಭಾರಿಯಾಗಿದ್ದ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿ ನಿವಾಸಿ, ಬಿಗ್ ಬಾಸ್ ಸ್ಪರ್ಧಿಯಾಗಿರುವ ಹನುಮಂತ ಲಮಾಣಿ ( Hanumantha Lamani ) ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾಗಿದ್ದಾರೆ‌.

ಹನುಮಂತನ ತಂದೆ-ತಾಯಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬುಧವಾರ ಮತದಾನ ಮಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ‌ಹನುಮಂತ ಅವರು ಚುನಾವಣೆ ರಾಯಭಾರಿ ಆಗಿದ್ದರು. ಎರಡೂ ಚುನಾವಣೆಯಲ್ಲಿ ಹನುಮಂತ ಅವರು ತಮ್ಮ ಗ್ರಾಮ ಚಿಲ್ಲೂರ ಬಡ್ನಿಯಲ್ಲಿರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು. ಈ ಬಾರಿ ಹನುಮಂತ 'ಬಿಗ್‌ಬಾಸ್' ರಿಯಾಲಿಟಿ ಶೋ‌ ಮನೆಯಲ್ಲಿದ್ದಾರೆ. ಅವರು ಮತದಾನ ಮಾಡಲು ಬಂದಿಲ್ಲ. ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.

'ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹನುಮಂತನ ಹೆಸರಿದೆ. ಈಗ ಆತ, ಬಿಗ್‌ಬಾಸ್‌ನಲ್ಲಿ ಇದ್ದಾನೆ. ಅವನನ್ನು ಸಂಪರ್ಕಿಸಲು ನಮಗೆ ಆಗುವುದಿಲ್ಲ. ಅವನ ಮೊಬೈಲ್ ಕೂಡ ನಮ್ಮ ಬಳಿಯೇ ಇದೆ. ನಾವಷ್ಟೇ ಬಂದು ಮತದಾನ ಮಾಡಿದ್ದೇವೆ' ಎಂದು ಹನುಮಂತನ ತಂದೆ ಮೇಘಪ್ಪ ಲಮಾಣಿ "ವಿಜಯವಾಣಿ" ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net