

ಕಾಸರಗೋಡು: ವಿವಾಹ ಭರವಸೆಯೊಡ್ಡಿ ಮಹಿಳೆಯನ್ನು ವಿವಿಧೆಡೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ತ್ರಿಶ್ಯೂರ್ ಕೈಪಮಂಗಳ ನಿವಾಸಿ ಪ್ರಶಾಂತ್ ಯಾನೆ ಶೋಭಿ ಎಂಬಾತನನ್ನು ಕಾಸರಗೋಡು ಡಿವೈಎಸ್ಪಿ ಸಿ.ಕೆ.ಸುನೀಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ವಿಚ್ಛೇದಿತ ಮಹಿಳೆಯರನ್ನು ಕೇಂದ್ರೀಕರಿಸಿ ಪ್ರೀತಿಯ ನಾಟಕವಾಡಿ, ವಿವಾಹ ಭರವಸೆಯೊಂದಿಗೆ ಲೈಂಗಿಕ ದೌರ್ಜನ್ಯವೆಸಗುವುದು ಈತನ ಹುನ್ನಾರ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ನಗರ ಮಹಿಳಾ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.