ಸುಬ್ರಹ್ಮಣ್ಯದಲ್ಲಿ ಛಾಯಾ ಮಾನಸ ಗಿಡ ವಿತರಣೆ

New Project (50)
Published on

ಸುಬ್ರಹ್ಮಣ್ಯ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸುಬ್ರಹ್ಮಣ್ಯ ಗ್ರಾಪಂ ಸಭಾಂಗಣದಲ್ಲಿ ಛಾಯಾ ಮಾನಸ ಗಿಡಗಳನ್ನು ವಿತರಣೆ ಮಾಡಲಾಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಗಿಡಗಳನ್ನು ಹಸ್ತಾಂತರಿಸಿದರು.

ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಸಸಿಗಳನ್ನು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿದರು.

ಗ್ರಾಪಂ ಕಾರ್ಯದರ್ಶಿ ಮೋನಪ್ಪ ಡಿ., ಐನೆಕಿದು ಬ್ಯಾಂಕ್ ಸಿಇಒ ಪ್ರಕಾಶ್ ಕೆ.ಎಸ್., ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ಮೂಲೆಮಜಲು, ಸುಬ್ರಹ್ಮಣ್ಯ ರೋಟರಿ ವಲಯ ಸೇನಾನಿ ವಿಶ್ವನಾಥ ನಡುತೋಟ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ರೋಟರಿ ಪೂರ್ವಾಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಗೋಪಾಲ ಎಣ್ಣೆಮಜಲ್, ಲೋಕೇಶ್ ಬಿ.ಎನ್., ವೆಂಕಟೇಶ ಎಚ್.ಎಲ್., ಭರತ್ ನೆಕ್ರಾಜೆ, ಪೂರ್ವ ಕಾರ್ಯದರ್ಶಿ ಡಾ.ರವಿ ಕಕ್ಕೆಪದವು, ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಸದಸ್ಯ ದಿನೇಶ್ ಎಣ್ಣೆಮಜಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net