ಚಿನ್ನಾಭರಣ ಕಳವು ಆರೋಪಿ ಬಂಧನ

arrested
Published on

ಕಾಸರಗೋಡು: ಕೊಳತ್ತೂರಿನಲ್ಲಿ ಮನೆ ಮಹಡಿಯ ಹೆಂಚು ಸರಿಸಿ ನುಗ್ಗಿ, ಕೊಠಡಿಯೊಳಗಿನ ಕಪಾಟಿನಲ್ಲಿರಿಸಿದ್ದ ಅರ್ಧ ಪವನ್ ಚಿನ್ನಾಭರಣ ಹಾಗೂ ಸೀರೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕೊಳತ್ತೂರು ಮನಿಯಾರಕೊಚ್ಚಿ ನಿವಾಸಿ ಭಾಸ್ಕರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಳತ್ತೂರು ನಾರಿಕ್ಕೋಟ್ ನಿವಾಸಿ ಸರೋಜಿನಿ ಎಂಬುವರ ಮನೆಯಿಂದ ಸೋಮವಾರ ಕಳವು ನಡೆದಿತ್ತು. ಸರೋಜಿನಿ ಪುತ್ರಿ ಮನೆಗೆ ತೆರಳಿದ್ದು, ವಾಪಸಾಗುವಾಗ ಕಳವು ಬೆಳಕಿಗೆ ಬಂದಿತ್ತು. ಏಣಿ ಸಹಾಯದಿಂದ ಮಹಡಿಯೇರಿ ಹೆಂಚು ಸರಿಸಿ ನುಗ್ಗಿ, ಕೃತ್ಯವೆಸಗಿದ ನಂತರ ಹೆಂಚು ಸರಿಪಡಿಸಿ ಕಳ್ಳ ಪರಾರಿಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net