

ಮಂಜೇಶ್ವರ: ಉದ್ಯಾವರ ತೋಟ ಜಿಎಂಎಲ್‌ಪಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಸೋಮವಾರ ಜರುಗಿತು. ಮಂಜೇಶ್ವರ ಗ್ರಾಪಂ ಸದಸ್ಯೆ ಕುಲ್ಸಮ್ಮ ಉದ್ಘಾಟಿಸಿದರು. ಉದ್ಯಾವರ ದುಬೈ ಸಮಿತಿ ಪದಾಧಿಕಾರಿಗಳಾದ ಅನ್ವರ್ ಇಸ್ಮಾಯಿಲ್ ಸಲೀಂ, ಮಸೀದಿ ಖತೀಬರಾದ ಅಬ್ದುಲ್ ಸಖಾಫಿ ಮಾತನಾಡಿದರು.
ಪಿ.ಟಿ.ಎ. ಅಧ್ಯಕ್ಷ ಅಬ್ದುಲ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರ ತೋಟಾ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಆಶಿಪ್ ಉದ್ಯಾವರ, ಉಮ್ಮರಾಲಿ, ಫಯಾಜ್, ಫಾರೂಕ್ ಶುಭಾಶಂಸನೆಗೈದರು. ಒಂದನೆ ತರಗತಿಯಿಂದ ನಾಲ್ಕನೆ ತರಗತಿವರೆಗಿನ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಉದ್ಯಾವರ ದುಬೈ ಸಮಿತಿ ಹಾಗೂ ತೋಟ ಶಾಲಾಭಿವೃದ್ಧಿ ಸಮಿತಿ ವತಿಯಿಂದ ವಿತರಿಸಲಾಯಿತು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ, ಗಾಯತ್ರಿ, ಅಭಿಲಾಷ್, ಸಮೀನಾ, ಆಯಿಷಾ ಸಹಕರಿಸಿದರು. ಹಿರಿಯ ಅಧ್ಯಾಪಕ ರವಿಶಂಕರ ನೆಗಳಗುಳಿ ವಂದಿಸಿದರು.