

ಕಾಸರಗೋಡು: ಶುಚಿತ್ವ ಕೇರಳ ಯೋಜನೆ ಅನ್ವಯ ಸರ್ಕಾರ ನಿರಂತರ ಪ್ರಚಾರ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇನ್ನೊಂದೆಡೆ ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಹೋಟೆಲೊಂದರ ಮಲಿನ ನೀರು ರಸ್ತೆಗೆ ಹರಿಯುತ್ತಿದೆ. ಇದು ಜನರಲ್ಲಿ ಸಾಂಕ್ರಾಮಿಕ ರೋಗ ೀತಿಗೆ ಕಾರಣವಾಗಿದೆ.
ಕಾಸರಗೋಡು ಕೆ.ಪಿ.ಆರ್. ರಾವ್ ರಸ್ತೆಯ ಹೋಟೆಲ್ ಒಂದರಿಂದ ಹರಿದುಬರುವ ಮಲಿನ ನೀರು, ಚರಂಡಿಯ ಸ್ಲಾೃಬ್ ಮೂಲಕ ರಸ್ತೆಗೆ ಹರಿಯುತ್ತಿದ್ದು, ಸ್ಥಳೀಯ ಪರಿಸರಾದ್ಯಂತ ದುರ್ವಾಸನೆಗೂ ಕಾರಣವಾಗಿದೆ. ನಗರದ ಹಲವೆಡೆ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಚರಂಡಿಗಳೊಳಗೆ ಕಸ ಸಂಗ್ರಹಗೊಳ್ಳುತ್ತಿದೆ. ಬಹುತೇಕ ಕಡೆಗಳಲ್ಲಿ ಚರಂಡಿ ಒಡೆದಿದ್ದು, ಕೊಳಚೆ ನೀರು ಹರಿವಿಗೆ ತೊಂದರೆಯಾಗುತ್ತಿದೆ.
ಮಳೆಗಾಲ ಸಮೀಪಿಸುತ್ತಿದ್ದು, ಶೀಘ್ರ ದುರಸ್ತಿ ಕಾರ್ಯಗಳು ಕೈಗೊಳ್ಳಬೇಕು ಎಂದು ನಗರ ನಿವಾಸಿಗಳು ನಗರಸಭೆಗೆ ಆಗ್ರಹಿಸಿದ್ದಾರೆ.