ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ದೃಢಕಲಶ

New Project (6)
Published on

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಳೆದು 48 ದಿನಗಳ ನಂತರ ಗುರುವಾರ ದೇವರಿಗೆ ದೃಢಕಲಶ ನೆರವೇರಿತು.

ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಬ್ರಹ್ಮಕಲಶೋತ್ಸವ ಸಂದರ್ಭ ಆರಂಭವಾದ ಶಿವಾರ್ಪಣಂ ವೈವಿಧ್ಯಮಯ ಯೋಜನೆಗಳಲ್ಲೊಂದಾದ ಶಿವಪಂಚಾಕ್ಷರಿ ಜಪಲಿಪಿ ಯಜ್ಞದ ಅಂಗವಾಗಿ ಅಷ್ಟ ಭಾಷೆಗಳಲ್ಲಿ ಮೂಡಿಬಂದ ಪುಸ್ತಕದ ಸಮರ್ಪಣೆ ನಡೆಯಿತು. 48 ಪುಟಗಳ 1500ಕ್ಕೂ ಅಧಿಕ ಪುಸ್ತಕಗಳಲ್ಲಿ ಭಗವದ್ಭಕ್ತರು 8 ಭಾಷೆಗಳಲ್ಲಿ ಶಿವಪಂಚಾಕ್ಷರಿ ಮಂತ್ರವನ್ನು ಬರೆದು ಕ್ಷೇತ್ರಕ್ಕೆ ಸಮರ್ಪಣೆ ಮಾಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಆಡಳಿತ ಮೊಕ್ತೇಸರ ವೈ.ಶಾಮ ಭಟ್, ಮೊಕ್ತೇಸರರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net